LATEST NEWS
19 ಡಾಲರ್ ಗೆ ಖರೀದಿಸಿದ ಕಚ್ಚಾತೈಲವನ್ನು 80 ಡಾಲರ್ ಗೆ ಮಾರಿ ಲಾಭ ಮಾಡಿಕೊಂಡ ಕೇಂದ್ರ ಸರಕಾರ…!!
ಮಂಗಳೂರು ಅಕ್ಟೋಬರ್ 22: ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಕೆಯಾದ ಕಾರಣ ಇಂಧನ ದರ ಗಗನಕ್ಕೇರುತ್ತಿದ್ದು, ಇದೀಗ ಕೇಂದ್ರ ಸರಕಾರ ತನ್ನ ಸಂಗ್ರಹಾಗಾರಗಳಲ್ಲಿ ಇರುವ ತೈಲವನ್ನು ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಕಂಪನಿಗಳಿಗೆ ಮಾರಲು ಆರಂಭಿಸಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 19 ಡಾಲರ್ ಇದ್ದಾಗ ಕೇಂದ್ರವು ಕಚ್ಚಾ ತೈಲ ಖರೀದಿಸಿತ್ತು. ಈಗ ತೈಲ ಬೆಲೆಯು ಬ್ಯಾರೆಲ್‌ಗೆ 80 ಡಾಲರ್‌ಗೆ ಏರಿಕೆಯಾಗಿದ್ದು, ಈ ಹಂತದಲ್ಲಿ ತೈಲ ಮಾರಾಟದ ಮೂಲಕ ಅದರ ಲಾಭವನ್ನು ಕೇಂದ್ರವು ಪಡೆದುಕೊಳ್ಳುತ್ತಿದೆ.
ಮಂಗಳೂರಿನ ಸಂಗ್ರಹಾಗಾರದಲ್ಲಿ ಇದ್ದ 3 ಲಕ್ಷ ಟನ್ ಕಚ್ಚಾ ತೈಲವನ್ನು ಖಾಲಿ ಮಾಡಲಾಗಿದೆ. ಈ ವರ್ಷದ ಅಂತ್ಯಕ್ಕೆ ಮೊದಲು ಇನ್ನುಳಿದ 4.5 ಲಕ್ಷ ಟನ್ ಕಚ್ಚಾ ತೈಲವನ್ನು ಕೂಡ ಮಾರಾಟ ಮಾಡಲಾಗುವುದು ಎಂದರು. ಐಎಸ್‌ಪಿಆರ್‌ಎಲ್ ಕಂಪನಿಯು ಮಂಗಳೂರಿನ 7.5 ಲಕ್ಷ ಟನ್ ಸಾಮರ್ಥ್ಯ ಒಂದು ಸಂಗ್ರಹಾಗಾರವನ್ನು ಎಂಆರ್‌ಪಿಎಲ್‌ಗೆ ಲೀಸ್ ಆಧಾರದಲ್ಲಿ ನೀಡಲಿದೆ. ಮಂಗಳೂರಿನಲ್ಲಿ ತಲಾ 7.5 ಲಕ್ಷ ಟನ್ ಸಾಮರ್ಥ್ಯದ ಎರಡು ಸಂಗ್ರಹಾಗಾರಗಳು ಇವೆ.
ಸರ್ಕಾರವು ಸಂಗ್ರಹಿಸಿದ್ದ ಕಚ್ಚಾ ತೈಲವನ್ನು ಎಂಆರ್‌ಪಿಎಲ್ ಮಾರುಕಟ್ಟೆ ದರ ನೀಡಿ ಖರೀದಿಸಿದೆ. ಮಂಗಳೂರಿನ ಸಂಗ್ರಹಾಗಾರದಲ್ಲಿ ಸೌದಿ ಅರೇಬಿಯಾದ ಕಚ್ಚಾ ತೈಲವನ್ನು ಎಂಆರ್‌ಪಿಎಲ್ ಸಂಗ್ರಹಿಸಲಿದೆ’ ಎಂದು ವಿವರಿಸಿದರು. ವಿಶಾಖಪಟ್ಟಣದಲ್ಲಿ ಇರುವ ಸಂಗ್ರಹಾಗಾರದಲ್ಲಿನ 1.5 ಲಕ್ಷ ಟನ್ ಕಚ್ಚಾ ತೈಲವನ್ನು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಖರೀದಿ ಮಾಡಿದೆ.