Connect with us

National

ಲಡಾಖ್ ಗಡಿ ಉದ್ವಿಗ್ನ ; ಮಿಸೈಲ್ ನಿಯೋಜನೆ

ನವದೆಹಲಿ, ಜೂನ್ 27, ಚೀನಾ ಗಡಿಭಾಗದಲ್ಲಿ ಉದ್ವಿಗ್ನ ವಾತಾವರಣ ಎದುರಾಗಿರುವಾಗಲೇ ಭಾರತೀಯ ವಾಯುಪಡೆ ಪೂರ್ವ ಲಡಾಖ್ ಭಾಗದಲ್ಲಿ ವಿಮಾನಗಳನ್ನು ಹೊಡೆದುರುಳಿಸಬಲ್ಲ ನೆಲದಿಂದ ಆಗಸಕ್ಕೆ ಚಿಮ್ಮುವ ಮಿಸೈಲ್ ಗಳನ್ನು ನಿಯೋಜನೆ ಮಾಡಿದೆ.


ಚೀನಾ ಪಡೆಯು ಗ಼ಡಿಭಾಗದಲ್ಲಿ ಸುಖೋಯ್ – 30 ಮಾದರಿಯ ಬಾಂಬರ್ ವಿಮಾನಗಳನ್ನು ಹಾರಿಸುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಭಾರತ ಕಡೆಯಿಂದಲೂ ಕ್ಷಿಪಣಿಗಳನ್ನು ರೆಡಿ ಮಾಡಲಾಗುತ್ತಿದೆ. ಚೀನಾ ಲಿಬರೇಶನ್ ಆರ್ಮಿ ನಡೆಸುವ ಯಾವುದೇ ಕೃತ್ಯಗಳನ್ನು ಎದುರಿಸಲು ಭಾರತದ ಆರ್ಮಿ ಮತ್ತು ವಾಯುಪಡೆ ಸಜ್ಜಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿದ್ದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.


ಲಡಾಖ್ ಗಡಿಭಾಗದಿಂದ ಹತ್ತು ಕಿಮೀ ದೂರದಲ್ಲಿ ಯುದ್ಧ ವಿಮಾನಗಳು ಹಾರಾಡುವುದನ್ನು ಭಾರತದ ರಾಡಾರ್ ಪತ್ತೆ ಮಾ಼ಡಿದೆ. ಇನ್ನು ಕೆಲವೇ ಸಮಯದಲ್ಲಿ ಪ್ರಬಲ ಅಸ್ತ್ರವೊಂದು ರಷ್ಯಾದಿಂದ ಸಿಗಲಿದ್ದು, ಅದನ್ನು ತಂದ ಕೂಡಲೇ ಲಡಾಖ್ ಭಾಗದಲ್ಲಿ ನಿಯೋಜನೆ ಮಾಡಲು ಸಿದ್ಧತೆ ನಡೆದಿದೆ ಎನ್ನಲಾಗುತ್ತಿದೆ.


ಈಗಾಗ್ಲೇ ಘರ್ಷಣೆಗೆ ಕಾರಣವಾಗಿರುವ ಗಡಿಭಾಗದ ಗ್ಯಾಲ್ವಾನ್ ವ್ಯಾಲಿ, ದೌಲತ್ ಬೇಗ್ ಓಲ್ದೀ ಸೆಕ್ಟರ್, ಪಾಂಗೊಂಗ್ ತ್ಸೊ ಸೇರಿದಂತೆ ವಾಸ್ತವ ಗಡಿರೇಖೆಯ ಉದ್ದಕ್ಕೂ ಚೀನಾ ಹೆಲಿಕಾಪ್ಟರ್ ಗಳು ಹಾರಾಟ ನಡೆಸುತ್ತಿವೆ. ಹೀಗಾಗಿ ಕ್ವಿಕ್ ರಿಯಾಕ್ಷನ್ ಮಿಸೈಲ್ ಗಳನ್ನು ಗಡಿಭಾಗದಲ್ಲಿ ನಿಯೋಜನೆ ಮಾಡಲಾಗಿದೆ. ಅದರಲ್ಲಿ ಅತ್ಯಾಧುನಿಕ ಮಾದರಿಯ ಆಕಾಶ್ ಕ್ಷಿಪಣಿಯೂ ಸೇರಿದೆ ಅನ್ನುವುದಾಗಿ ವರದಿ ಹೇಳಿದೆ.
ಮೇ ತಿಂಗಳ ಆರಂಭದಲ್ಲಿ ಚೀನಾದ ಯುದ್ಧ ವಿಮಾನಗಳು ಹಾರಾಟದಲ್ಲಿ ತೊಡಗಿದಾಗಲೇ ಭಾರತದ ವಾಯುಪಡೆಯಿಂದಲೂ ಸುಖೋಯ್ 30 ಯುದ್ಧ ವಿಮಾನಗಳನ್ನು ಅಲ್ಲಿಗೆ ಕಳುಹಿಸಲಾಗಿತ್ತು. ಹೀಗಾಗಿ ಅಲ್ಲೀಗ ಗಡಿಗೆ ಬಂದ ವಿಮಾನಗಳು ಭಾರತದ ರಾಡಾರ್ ಕಣ್ಣಿನಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ. ವಾಸ್ತವ ಗಡಿ ರೇಖೆಯ ಉದ್ದಕ್ಕೂ ಚೀನಾ ಹೆಲಿಕಾಪ್ಟರ್ ಗಳ ಚಲನವಲನಗಳನ್ನು ದಾಖಲಿಸುತ್ತಿದ್ದೇವೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *