LATEST NEWS
ಟಿ20 ವಿಶ್ವಕಪ್ ನಿಂದ ಭಾರತ ಹೊರಕ್ಕೆ….!!

ಯುಎಇ :ವಿಶ್ವಕಪ್ ಟಿ20 ಯಿಂದ ಭಾರತ ಹೊರಗೆ ಬಂದಿದೆ. ಸೆಮಿಫೈನಲ್‍ಗೇರಲು ನ್ಯೂಜಿಲೆಂಡ್ ಸೋಲನ್ನು ಆಶಿಸುತ್ತಿದ್ದ ಭಾರತಕ್ಕೆ ನಿರಾಸೆಯಾಗಿದ್ದು, ಇಂದು ನಡೆದ ಪಂದ್ಯದಲ್ಲಿ ಅಘ್ಘಾನಿಸ್ತಾನ ವಿರುದ್ಧ 8 ವಿಕೆಟ್‍ಗಳ ಜಯದೊಂದಿಗೆ ಗ್ರೂಪ್-2ರಲ್ಲಿ ದ್ವಿತೀಯ ಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿತು. ಈ ಮೂಲಕ ಭಾರತದ ಸೆಮಿಫೈನಲ್ ಕನಸು ಭಗ್ನಗೊಂಡಿದೆ.
ನ್ಯೂಜಿಲೆಂಡ್ ವಿರುದ್ಧ ಅಘ್ಘಾನಿಸ್ತಾನ ಗೆಲ್ಲುತ್ತಿದ್ದರೆ ಭಾರತ ತಂಡ ನಾಳೆಯ ಪಂದ್ಯದ ಫಲಿತಾಂಶವನ್ನು ಗಮನಿಸಿ ಸೆಮಿಫೈನಲ್ ಪ್ರವೇಶಿಸುವ ಅವಕಾಶವಿತ್ತು. ಆದರೆ ಇಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆಲುವಿನೊಂದಿಗೆ ಈ ಅವಕಾಶ ಭಾರತಕ್ಕೆ ಕೈತಪ್ಪಿತು.
ಅಘ್ಘಾನಿಸ್ತಾನ ನೀಡಿದ 125 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ನ್ಯೂಜಿಲೆಂಡ್ 18.1 ಓವರ್ ಗಳಲ್ಲಿ 125 ರನ್ ಸಿಡಿಸಿ ಗೆದ್ದು ಬೀಗಿತು. ನ್ಯೂಜಿಲೆಂಡ್ ಪರ ಕೇನ್ ವಿಲಿಯಮ್ಸನ್ 40 ರನ್ (42 ಎಸೆತ, 3 ಬೌಂಡರಿ) ಮತ್ತು ಡೆವೊನ್ ಕಾನ್ವೇ 36 ರನ್ ( 32 ಎಸೆತ, 4 ಬೌಂಡರಿ) ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
