DAKSHINA KANNADA
ಪುತ್ತೂರಿನ ಮಂಗಲ್ ಪಾಂಡೆ ಚೌಕದಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ಪುತ್ತೂರು, ಆಗಸ್ಟ್ 15: 76 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಪುತ್ತೂರಿನ ಮಂಗಲ್ ಪಾಂಡೆ ಚೌಕದಲ್ಲಿ ನೆರವೇರಿಸಲಾಯಿತು. ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್ ಧ್ವಜಾರೋಹಣ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಪೋಲೀಸ್, ಎನ್.ಸಿ.ಸಿ ತಂಡದ ವಿಶೇಷ ಪಥಸಂಚಲನವೂ ನೆರವೇರಿತು. ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದ ಸಹಾಯಕ ಆಯುಕ್ತ ಗಿರೀಶ್ ನಂದನ್ ದಕ್ಷಿಣಕನ್ನಡ ಜಿಲ್ಲೆಗೂ , ಸ್ವಾತಂತ್ರ್ಯ ಸಂಗ್ರಾಮಕ್ಕೂ ನಿಕಟ ಸಂಬಂಧವಿದೆ.
ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದಿರುವುದು ಎನ್ನುವುದು ಹೆಚ್ಚಿನ ಜನಕ್ಕೆ ತಿಳಿದಿಲ್ಲ. ಬ್ರಿಟಿಷರ ತೆರಿಗೆ ಕಾನೂನನ್ನು ವಿರೋಧಿಸಿ ಸುಳ್ಯದಲ್ಲಿ 1837 ರಲ್ಲಿ ರಾಮಯ್ಯ ಗೌಡ ನೇತೃತ್ವದಲ್ಲಿ ಸುಳ್ಯದಿಂದ ಮಂಗಳೂರು ತನಕ ಜಾಥಾ ನಡೆಸಿ ಮಂಗಳೂರಿನ ಬಾವುಟಗುಡ್ಡೆಯಲ್ಲಿದ್ದ ಬ್ರಿಟಿಷ್ ಧ್ವಜವನ್ನು ತೆಗೆದು ಪ್ರತಿಭಟಿಸಿದ್ದರು.
ವಿವಿಧ ಶಾಲಾ ಮಕ್ಕಳು ರಾಷ್ಟ್ರ ಧ್ವಜವನ್ನು ಹಿಡಿದು ಪುತ್ತೂರು ಪೇಟೆಯಾದ್ಯಂತ ಜಾಥಾ ನೆರವೇರಿಸುವ ಮೂಲಕ ಸಂಭ್ರಮಿಸಿದರು.