KARNATAKA
ಮಂಗಳೂರು : ಮೊದಲ ಅರ್ಧ ವರ್ಷದಲ್ಲಿ 736.40 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದ ಕರ್ಣಾಟಕ ಬ್ಯಾಂಕ್
ಮಂಗಳೂರು: ಕರಾವಳಿಯ ಹೆಮ್ಮೆಯ ಕರ್ಣಾಟಕ ಬ್ಯಾಂಕ್ ಪ್ರಸಕ್ತ ಹಣಕಾಸು ವರ್ಷದ ಮೊದಲ ಅರ್ಧ ವರ್ಷದಲ್ಲಿ 736.40 ಕೋಟಿ ರೂ. ನಿವ್ವಳ ಲಾಭವನ್ನು ಗಳಿಸಿದ್ದು ಕಳೆದ ವರ್ಷದ ಇದೇ ಅವಧಿಯಲ್ಲಿ ಇದ್ದ ರೂ. 700.96 ಕೋಟಿಗೆ ಹೋಲಿಸಿದರೆ ನಿವ್ವಳ ಲಾಭವು ಶೇಕಡ 5.06 ರಷ್ಟು ಸುಧಾರಿಸಿದೆ.
ಗಳೂರಿನಲ್ಲಿ ಇಂದು ನಡೆದ ಆಡಳಿತ ನಿರ್ದೇಶಕರ ಮಂಡಳಿಯ ಸಭೆಯಲ್ಲಿ, ಮಂಡಳಿಯು 2024ರ ಸೆ.30 ಕ್ಕೆ ಕೊನೆಗೊಂಡ ತ್ರೈಮಾಸಿಕ ಮತ್ತು ಅರ್ಧ ವರ್ಷದ ಆರ್ಥಿಕ ಫಲಿತಾಂಶಗಳನ್ನು ಅನುಮೋದಿಸಿದೆ. ಇದಲ್ಲದೆ, ಸೆಪ್ಟೆಂಬರ್ 2023 ರಲ್ಲಿ ಇದ್ದ 330.26 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ಸೆಪ್ಟೆಂಬರ್ 2024 ಕ್ಕೆ ಕೊನೆಗೊಂಡ ತ್ರೈಮಾಸಿಕ ದಲ್ಲಿ ನಿವ್ವಳ ಲಾಭವು ರೂ 336.07 ಕೋಟಿಯಷ್ಟಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶ್ರೀಕೃಷ್ಣನ್ ತಿಳಿಸಿದ್ದಾರೆ.
ಸೆಪ್ಟೆಂಬರ್ 2024 ಕ್ಕೆ ಕೊನೆಗೊಳ್ಳುವ ಅರ್ಧ ವರ್ಷದಲ್ಲಿ, ನಿವ್ವಳ ಬಡ್ಡಿ ಆದಾಯವು ಶೇಕಡ 6.10 ರಷ್ಟು ಏರಿಕೆಯಾಗಿದ್ದು, 1,637.09 ಕೋಟಿಗಳಿಂದ ರೂ 1,736.92 ಕೋಟಿಗಳಿಗೆ ತಲುಪಿದೆ. ಎನ್‍ಪಿಎ ಪ್ರಮಾಣ ಮತ್ತಷ್ಟು ಮಂದವಾಗಿದ್ದು, ಜಿಎನ್‍ಪಿಎ ಶೇಕಡ 3.21ಕ್ಕೆ ಇಳಿದಿದೆ. 30/06/24 ರ ವೇಳೆಗೆ ಇದು ಶೇಕಡ 3.54 ರಷ್ಟಿತ್ತು. ಅಂತೆಯೇ ಎನ್‍ಎನ್‍ಪಿಎ ಕೂಡಾ ಶೇಕಡ 1.46ಕ್ಕೆ ಇಳಿಕೆಯಾಗಿದ್ದು, 30/06/24 ಇದು ಶೇಕಡ 1.66 ರಷ್ಟಿತ್ತು. ಸುಮಾರು ಒಂದು ವರ್ಷದ ಹಿಂದೆ, ಅಂದರೆ 30/09/2023 ಕ್ಕೆ ಜಿಎನ್‍ಪಿಎ ಶೇಕಡ 3.47 ಮತ್ತು ಎನ್‍ಎನ್‍ಪಿಎ ಶೇಕಡ 1.36 ರಷ್ಟಿತ್ತು.
ಬ್ಯಾಂಕಿನ ಒಟ್ಟು ವ್ಯವಹಾರವು 2025ರ 2ನೇ ತ್ರೈಮಾಸಿಕದ ವೇಳೆಗೆ 1,75,284.08 ಕೋಟಿಗಳಾಗಿವೆ (ಒಟ್ಟು ಆಧಾರದ ಮೇಲೆ). 2024ರ 2ನೇ ತ್ರೈಮಾಸಿಕದಲ್ಲಿ ಈ ಪ್ರಮಾಣ 1,56,467.71 ಕೋಟಿ ರೂ.ಗಳಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡ 12.03 ಬೆಳವಣಿಗೆಯನ್ನು ದಾಖಲಿಸಿದೆ. ಬ್ಯಾಂಕಿನ ಒಟ್ಟು ಠೇವಣಿಗಳು 2025ರ 2ನೇ ತ್ರೈಮಾಸಿಕದ ವೇಳೆಗೆ 99,967.99 ಕೋಟಿ ರೂಪಾಯಿ ಆಗಿದ್ದು, 2024ರ 2ನೇ ತ್ರೈಮಾಸಿಕದಲ್ಲಿ ಇದ್ದ 89,531.73 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ಶೇಕಡ 11.66 ಹೆಚ್ಚಳ ದಾಖಲಿಸಿದೆ. (ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಉದ್ಯಮ ಪ್ರಗತಿ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್‍ಗಳಲ್ಲಿ ಶೇಕಡ 12ರಷ್ಟಿದೆ). ಬ್ಯಾಂಕ್‍ನ ಒಟ್ಟು ಮುಂಗಡಗಳು 2025ರ 2ನೇ ತ್ರೈಮಾಸಿಕದಲ್ಲಿ 75,316.09 ಕೋಟಿ ರೂಪಾಯಿಗಳಾಗಿದ್ದು, 2024ರ 2ನೇ ತ್ರೈಮಾಸಿಕ ದಲ್ಲಿ ಇದ್ದ 66,935.98 ಕೋಟಿ ರೂ.ಗಳಿಗೆ ಹೋಲಿಸಿದರೆ, ಶೇಕಡ 12.52 ಪ್ರಗತಿ ದಾಖಲಿಸಿದೆ. (ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಉದ್ಯಮ ಪ್ರಗತಿ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್‍ಗಳಲ್ಲಿ ಶೇಕಡ 13ರಷ್ಟಿದೆ). 2024ರ ಎರಡನೇ ತ್ರೈಮಾಸಿಕ ಅವಧಿಗೆ ಹೋಲಿಸಿದರೆ, ಬ್ಯಾಂಕಿನ ಚಿಲ್ಲರೆ ಮುಂಗಡ ಪ್ರಮಾಣ 2025ರ 2ನೇ ತ್ರೈಮಾಸಿಕ ಅವಧಿಯಲ್ಲಿ ಶೇಕಡ 12.2ರಷ್ಟು ಪ್ರಗತಿ ದಾಖಲಿಸಿದೆ. ಬ್ಯಾಂಕಿನ ಸಿಡಿ ಅನುಪಾತ (ಒಟ್ಟು) ಶೇಕಡ 75.34 ರಷ್ಟಿದೆ ಎಂದು ಪ್ರಕಟಣೆ ವಿವರಿಸಿದೆ.
ಬ್ಯಾಂಕಿನ ಬಂಡವಾಳ ಸಮರ್ಪಕತೆಯ ಅನುಪಾತವು ಶೇಕಡ 17.58 ರಷ್ಟಿದ್ದು, 30-09-2023ಕ್ಕೆ ಇದು ಶೇಕಡ 16.20 ರಷ್ಟಾಗಿತ್ತು. ಭಾರತೀಯ ರಿಸರ್ವ್ ಬ್ಯಾಂಕಿನ ಪರಿಷ್ಕøತ ಕರಡು ಮಾರ್ಗಸೂಚಿಗಳಿಗೆ ಅನುಸಾರವಾಗಿ ಲಿಕ್ವಿಡಿಟಿ ಕವರೇಜ್ ಅನುಪಾತದ (ಎಲ್‍ಸಿಆರ್) 30ನೇ ಸೆಪ್ಟೆಂಬರ್ 2024ರ ವೇಳೆಗೆ ಶೇಕಡ 100 ರ ಶಾಸನಬದ್ಧ ಗುರಿಗೆ ಪ್ರತಿ ಯಾಗಿ ಶೇಕಡ 143.93 ರಷ್ಟು ಆಗಿದೆ. ನಿವ್ವಳ ಬಡ್ಡಿಯ ಮಾರ್ಜಿನ್ ಪ್ರಮಾಣ 30/09/2023 ಕ್ಕೆ ಹೋಲಿಸಿದರೆ ಶೇ. 3.65 ರಿಂದ ಶೇಕಡ 3.38 ಕ್ಕೆ ಕಡಿಮೆಯಾಗಿದೆ.
“ಕರ್ಣಾಟಕ ಬ್ಯಾಂಕ್ 2025ನೇ ಹಣಕಾಸು ವರ್ಷದ 2ನೇ ತ್ರೈಮಾಸಿಕದಲ್ಲಿ ಪುಸ್ತಕದ ಗುಣಮಟ್ಟದಲ್ಲಿ ಸುಧಾರಣೆ ಮತ್ತು ಚಿಲ್ಲರೆ ವಿಭಾಗದಲ್ಲಿ ಬೆಳವಣಿಗೆಯೊಂದಿಗೆ ಸ್ಥಿರವಾದ ಆರ್ಥಿಕ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದೆ, ಅದು ಮುಂದೆ ಇನ್ನಷ್ಟು ದೃಢವಾಗಲಿದೆ. ಚಾಲ್ತಿಯಲ್ಲಿರುವ ಮಾರುಕಟ್ಟೆ ಪರಿಸ್ಥಿತಿಗಳಲ್ಲಿ, ವರ್ಷದ ಉಳಿದ ಅವಧಿಯ ಬೆಳವಣಿಗೆಯ ಪಥವನ್ನು ಬ್ಯಾಂಕ್ ವ್ಯಾಖ್ಯಾನಿಸಿದೆ ಮತ್ತು ನಮ್ಮ ಗುರಿಗಳನ್ನು ಸಾಧಿಸುವ ವಿಶ್ವಾಸವಿದೆ ಮತ್ತು ನಮ್ಮ ಪರಿವರ್ತಕ ಪ್ರಯಾಣವು ಹೆಚ್ಚು ಸೆಳೆತವನ್ನು ಪಡೆಯುತ್ತಿದೆ ಮತ್ತು ಮುಂದಿನ ದಿನಗಳಲ್ಲಿ ನಾವು ಉತ್ತಮ ಫಲಿತಾಂಶಗಳನ್ನು ನೋಡುತ್ತೇವೆ” ಎಂದು ಹೇಳಿದ್ದಾರೆ.
ಬ್ಯಾಂಕ್‍ನ ಕಾರ್ಯನಿರ್ವಾಹಕ ನಿರ್ದೇಶಕರಾದ ಶೇಖರ್ ರಾವ್ ಮಾತನಾಡಿ, “25ನೇ ಹಣಕಾಸು ವರ್ಷದ 2ನೇ ತ್ರೈಮಾಸಿದ ಕಾರ್ಯಕ್ಷಮತೆಯಿಂದ ನಾವು ಸಂತಸಗೊಂಡಿದ್ದೇವೆ, ಕ್ರೋಢೀಕರಣ ಮತ್ತು ಎನ್‍ಪಿಎ ಮತ್ತು ಜಾರುವಿಕೆ ಮೇಲಿನ ನಿಯಂತ್ರಣ ಮತ್ತಷ್ಟು ಸುಧಾರಿಸಿದೆ. ಅಪಾಯ ನಿರ್ವಹಣೆಯನ್ನು ಬಲಪಡಿಸುವುದು ಒಂದು ಪ್ರಮುಖ ಗಮನವಾ ಗಿದೆ. ಇದು ಉತ್ತಮ ಆಸ್ತಿ ಗುಣಮಟ್ಟಕ್ಕೆ ಕಾರಣವಾಗುತ್ತದೆ ಎಂದು ವಿವರಿಸಿದರು.
ನಮ್ಮ ಡಿಜಿಟಲ್ ಉಪಕ್ರಮಗಳು ಗಮನಾರ್ಹ ಪ್ರಗತಿಯನ್ನು ಸಾಧಿಸಿವೆ, ಗ್ರಾಹಕರ ಅನುಭವ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಿವೆ. ಈ ಹಂತಗಳು ಭವಿಷ್ಯದ ಬೆಳವಣಿಗೆಗೆ ನಮಗೆ ಉತ್ತಮ ಸ್ಥಾನವನ್ನು ನೀಡಿದೆ. 25 ನೇ ಹಣ ಕಾಸು ವರ್ಷದ ಉಳಿದ ಭಾಗ ನಮ್ಮ ಮುಂದಿದ್ದು, ಈ ಆವೇಗವನ್ನು ಕಾಪಾಡಿಕೊಳ್ಳಲು, ತಂತ್ರಜ್ಞಾನದ ಮೂಲಕ ಬೆಳವಣಿ ಗೆಗೆ ಚಾಲನೆ ಮಾಡಲು ಮತ್ತು ಬಲವಾದ ಹಾಗೂ ಸ್ಥಿರವಾದ ಬ್ಯಾಲೆನ್ಸ್ ಶೀಟ್ ಅನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ ಎಂದಿರುವುದಾಗಿ ಬ್ಯಾಂಕಿನ ಪ್ರಕಟಣೆ ತಿಳಿಸಿದೆ.