Connect with us

  LATEST NEWS

  ಲೋಕಸಭಾ ಚುನಾವಣೆ ಹಿನ್ನೆಲೆ, ಮಂಗಳೂರಿನಲ್ಲಿ 7 ಮಂದಿ ಕ್ರಿಮಿನಲ್‌ಗಳ ಗಡಿಪಾರು..!

  ಮಂಗಳೂರು : ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಗಂಭೀರ ಕ್ರಿಮಿನಲ್ ಪ್ರಕರಣಗಳ ಆರೋಪ‌ ಎದುರಿಸುತ್ತಿರುವ ಏಳು ಮಂದಿ ಆರೋಪಿಗಳನ್ನು‌ ಮೂರು ತಿಂಗಳ ಅವಧಿಗೆ ಗಡಿಪಾರು ಮಾಡಲಾಗಿದೆ.

  ಮಂಗಳೂರು ‌ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗ್ರವಾಲ್ ಈ ಆದೇಶ ಹೊರಡಿಸಿದ್ದಾರೆ. ಉರ್ವ ಠಾಣೆ ವ್ಯಾಪ್ತಿಯ‌ ಕೋಡಿಕಲ್ ಅಶೋಕನಗರದ ಪ್ರೀತಂ ಯಾನೆ ಅಭಿಲಾಶ್, ಉರ್ವದ ಹೇಮಂತ್ ಯಾನೆ ಸೋನು, ಕುಂಪಲದ ಶಿವರಾಜ್ ಯಾನೆ ಶಿವು, ಪಿಲಾರ್‌ನ ಎಡ್ವಿನ್ ರಾಹುಲ್ ಡಿಸೋಜ, ಮೇಲಂಗಡಿಯ ಇಸ್ಮಾಯಿಲ್, ಕೋಡಿಕಲ್‌ನ ಪ್ರವೀಣ್ ಪೂಜಾರಿ, ದೇರಳಕಟ್ಟೆ ಬದ್ಯಾರ್‌ನ ಮುಹಮ್ಮದ್ ‌ಮುಸ್ತಫಾ ಗಡಿಪಾರಿಗೊಳಗಾದ ಆರೋಪಿಗಳಾಗಿದ್ದಾರೆ.‌ ಇವರ ವಿರುದ್ಧ ನಾನಾ ಠಾಣೆಗಳಲ್ಲಿ‌ ಹಲವು ಪ್ರಕರಣ ದಾಖಲಾಗಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ಮೂರು ತಿಂಗಳ ಅವಧಿಗೆ ಗಡಿಪಾರು ‌ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply