Connect with us

DAKSHINA KANNADA

ಕುಖ್ಯಾತ ‘ಗರುಡ ಗ್ಯಾಂಗ್‌’ ನ ನಟೋರಿಯಸ್ ಸದಸ್ಯ ಹಮೀದ್ ಅರೆಸ್ಟ್..!

ಪುತ್ತೂರು : ಕುಖ್ಯಾತ ಗರುಡ ಗ್ಯಾಂಗಿನ ನಟೋರಿಯಸ್ ಸ್ಟಾರ್  ಹಮೀದ್ ನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ರೋಡ್  ಕನ್ಸ್ಟ್ರಕ್ಷನ್ ಕಂಪೆನಿಗೆ ಸೇರಿದ 40 ಕಬ್ಬಿಣದ ಪ್ಲೇಟ್ ಗಳನ್ನು ಕಳ್ಳತನ ಮಾಡಿದ ಪ್ರಕರಣದ ಬೆನ್ನತ್ತಿ ಹೋದ ಪೊಲೀಸರಿಗೆ ಹಮೀದ್ ಸೆರೆ ಸಿಕ್ಕಿದ್ದಾನೆ.

ಉಪ್ಪಿನಂಗಡಿ ಠಾಣಾ ತನಿಖಾ ಪಿಎಸ್ ಐ ರುಕ್ಮ ನಾಯ್ಕ್ ನೇತೃತ್ವದ ತಂಡ ಕಡಬದ ಆತನ ಮನೆಯಿಂದ ದಸ್ತಗಿರಿ ಮಾಡಿದ್ದಾರೆ. ಕಡಬ ತಾಲೂಕು ಐತ್ತೂರು ಗ್ರಾಮದ ಕಾರ್ಯತಡ್ಕ ನಿವಾಸಿ ಈ ನಟೋರಿಯಸ್ ಅಬ್ದುಲ್ ಹಮೀದ್ @ ಹಮೀದ್ (27) 10 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ರಾಜ್ಯದ ವಿವಿಧ ಠಾಣೆಯ ಪೊಲೀಸರಿಗೆ ಬೇಕಾಗಿದ್ದ.
ಬಂಧಿತ ಹಮೀದ್ ಕಡಬದ ಕೌಕ್ರಾಡಿ ಗ್ರಾಮದ ಪರಿಯಶಾಂತಿ, ಬೆದ್ರೋಡಿ ನೀರಕಟ್ಟೆ ಎಂಬಲ್ಲಿ ಕಳೆದ ವರ್ಷ ಹಾಗೂ ಈ ವರ್ಷ ಕಳ್ಳತನ ಮಾಡಿರುವುದಾಗಿ ತಪ್ಪೋಪ್ಪಿ ಗೊಂಡಿದ್ದಾನೆ. ಆರೋಪಿಯು 10-10-2023 ರಂದು ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ಹೆದ್ದಾರಿ 75 ರ ಅಗಲೀಕರಣ ಕಾಮಗಾರಿಗೆ ಉಪಯೋಗಿಸುವ ಕೆ.ಎನ್. ಆರ್ ಸಂಸ್ಥೆಯ ಕಬ್ಬಿಣದ ಸೀಟ್ ಗಳನ್ನು ಕಳ್ಳತನ ಮಾಡಿದ್ದ. ಈತನ ವಿರುದ್ದ ವಿವಿಧ ಠಾಣೆಗಳಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದೆ . ಮಂಗಳೂರು ಕಂಕನಾಡಿ ಪೊಲೀಸ್ ಠಾಣೆ, ಮಂಗಳೂರು ಉತ್ತರ ಪೊಲೀಸ್ ಠಾಣೆ, ಉಡುಪಿ ಜಿಲ್ಲೆಯ ಗಂಗೋಳ್ಳಿ ಪೊಲೀಸ್ ಠಾಣಾ ಆತ್ಮಹತ್ಯೆ ಪ್ರಚೋದನೆ, ದಾವಣಗೆರೆ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆ, ಸಕಲೇಶಪುರ ನಗರ ಪೊಲೀಸ್ ಠಾಣೆ, ಕಡಬ ಪೊಲೀಸ್ ಠಾಣೆ, ಬೆಂಗಳೂರು ಕೊತ್ತುಲೂರು ಪೊಲೀಸ್ ಠಾಣೆಯಲ್ಲಿ ದರೊಡೆ ಪ್ರಕರಣ, ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ದರೊಡೆ ಪ್ರಕರಣ , ಬೆಳ್ತಂಗಡಿ ಪೊಲೀಸ್‌ ಠಾಣಾ ಪ್ರಕರಣ ಗಳಲ್ಲೂ ಅರೋಪಿಯಾಗಿದ್ದು ಪೊಲೀಸರಿಗೆ ಬೇಕಾಗಿದ್ದ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *