Connect with us

LATEST NEWS

ಮಧ್ಯ ಸಮುದ್ರದಲ್ಲಿ ರೋಚಕ ಕಾರ್ಯಾಚರಣೆ, ಪಾಕ್ ಮಿಲಿಟರಿ ಹಡಗನ್ನು ಅಟ್ಟಾಡಿಸಿ ವಶದಲ್ಲಿದ್ದ 7 ಭಾರತೀಯ ಮೀನುಗಾರರನ್ನು ರಕ್ಷಿಸಿದ ಕೋಸ್ಟ್ ಗಾರ್ಡ್..!

ಭಾರತೀಯ ಕೋಸ್ಟ್ ಗಾರ್ಡ್ (indian coast guard) ಸಮುದ್ರದ ಮಧ್ಯಭಾಗದಲ್ಲಿ ನಡೆಸಿದ ರೋಚಕ ಕಾರ್ಯಾಚರಣೆಯಲ್ಲಿ ಪಾಕ್ ಮಿಲಿಟರಿ ಹಡಗನ್ನು ಅಟ್ಟಾಡಿಸಿ ಅವರ ವಶದಲ್ಲಿದ್ದ 7 ಮಂದಿ ಭಾರತೀಯ ಮೀನುಗಾರರನ್ನು ರಕ್ಷಣೆ ಮಾಡಿದೆ.

ಗುಜರಾತ್ : ಭಾರತೀಯ ಕೋಸ್ಟ್ ಗಾರ್ಡ್( indian coast guard) ಸಮುದ್ರದ ಮಧ್ಯಭಾಗದಲ್ಲಿ ನಡೆಸಿದ ರೋಚಕ ಕಾರ್ಯಾಚರಣೆಯಲ್ಲಿ ಪಾಕ್ ಮಿಲಿಟರಿ ಹಡಗನ್ನು ಅಟ್ಟಾಡಿಸಿ ಅವರ ವಶದಲ್ಲಿದ್ದ 7 ಮಂದಿ ಭಾರತೀಯ ಮೀನುಗಾರರನ್ನು ರಕ್ಷಣೆ ಮಾಡಿದೆ.


ಗುಜರಾತ್ ಕರಾವಳಿಯ ಮಧ್ಯ ಸಮುದ್ರದಲ್ಲಿ ಪಾಕಿಸ್ತಾನದ ಕಡಲ ಭದ್ರತಾ ಏಜೆನ್ಸಿ (ಪಿಎಂಎಸ್‌ಎ) ವಶಪಡಿಸಿಕೊಂಡ ಏಳು ಭಾರತೀಯ ಮೀನುಗಾರರನ್ನು ಕರಾವಳಿ ಕಾವಲು ಪಡೆ ಸುರಕ್ಷಿತವಾಗಿ ರಕ್ಷಿಸಿದೆ ಕರಾವಳಿ ಕಾವಲು ಪಡೆಗೆ ಮೀನುಗಾರಿಕೆ ರಹಿತ ವಲಯ (ಎನ್‌ಎಫ್‌ಜೆಡ್) ಬಳಿ ಭಾರತೀಯ ಮೀನುಗಾರಿಕಾ ದೋಣಿ (ಐಎಫ್‌ಬಿ) ನಿಂದ ತೊಂದರೆಯ ಸಂಕೇತ ಸಿಕ್ಕಿದಾಗ ಕೂಡಲೇ ಕಾರ್ಯಾಚರಣೆ ನಡೆಸಿತು ಎಂ್ಉ ಕೋಸ್ಟ್ ಗಾರ್ಡ್ ಮಾಹಿತಿ ನೀಡಿದೆ. ಅಪರಾಹ್ನ 15:30 pm ನಲ್ಲಿ, ಗಸ್ತು ತಿರುಗುತ್ತಿದ್ದ ICG ಹಡಗು NFZ ಬಳಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಮೀನುಗಾರಿಕಾ ದೋಣಿಯಿಂದ ದುರಂತದ ಕರೆಯನ್ನು ಸ್ವೀಕರಿಸಿತು. ಮತ್ತೊಂದು ಭಾರತೀಯ ಮೀನುಗಾರಿಕಾ ದೋಣಿ ಕಲ್ ಭೈರವ್ ಅನ್ನು ಪಾಕಿಸ್ತಾನದ ಪಿಎಂಎಸ್‌ಎ ಹಡಗಿನಿಂದ ತಡೆಹಿಡಿಯಲಾಗಿದ್ದು ದೋಣಿಯಲ್ಲಿದ್ದ ಏಳು ಭಾರತೀಯ ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಬಂದಿತ್ತು.

ಕೋಸ್ಟ್ ಗಾರ್ಡ್ ತಕ್ಷಣವೇ ಕಾರ್ಯಪ್ರವೃತ್ತವಾಯಿತು ಮತ್ತು ಭಾರತ-ಪಾಕಿಸ್ತಾನ ಸಮುದ್ರ ಗಡಿ (IMBL) ಬಳಿಯ ಸ್ಥಳಕ್ಕೆ ತನ್ನ ಹಡಗನ್ನು ಕಳುಹಿಸಿತು. ಸಮುದ್ರದ ಮಧ್ಯೆ ಪಾಕಿಸ್ತಾನದ ಪಿಎಂಎಸ್‌ಎ ಹಡಗನ್ನು ಚೇಸ್ ಮಾಡಿದ ಭಾರತೀಯ ಕೋಸ್ಟ್ ಗಾರ್ಡ್ ನೌಕೆ ಪಾಕ್ ಹಡಗನ್ನು ಅಡ್ಡ ಹಾಕಿ ಅದರಲ್ಲಿ ಬಂಧಿಸಿ ಕರೆದೊಯ್ಯುತಿದ್ದ ಏಳು ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಯಿತು. ಆದ್ರೆ ದುರದೃಷ್ಟವಶಾತ್, ಭಾರತೀಯ ಮೀನುಗಾರಿಕಾ ದೋಣಿ, ಕಲ್ ಭೈರವ್, ಘಟನೆಯ ಸಮಯದಲ್ಲಿ ಹಾನಿಗೊಳಗಾಗಿ ಮುಳುಗಿದೆ ಎನ್ನಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *