LATEST NEWS
ತಮ್ಮದೇ ಟ್ರೋಲ್ ಪೋಟೋವನ್ನು ಜಾಲತಾಣದಲ್ಲಿ ಹಂಚಿಕೊಂಡ ಸಂಸದ ಶಶಿತರೂರ್

ಕೇರಳ ಅಗಸ್ಟ್ 28: ಇತ್ತೀಚೆಗೆ ಓಣಂ ಸಂದರ್ಭ ದೇವಸ್ಥಾನವೊಂದರಲ್ಲಿ ಕಾಂಗ್ರೇಸ್ ಸಂಸದ ಶಶಿತರೂರ್ ಹಿಡುಗಾಯಿ ಹೊಡೆಯುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿದ್ದು, ಟ್ರೋಲ್ ಆದ ಪೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸ್ವತಃ ಶಶಿ ತರೂರ್ ಅವರು ಹಂಚಿಕೊಂಡಿದ್ದಾರೆ.
ನಾಣು ತೆಂಗಿನಕಾಯಿಯನ್ನು ಶಾಸ್ತ್ರೀಯವಾಗಿ ಒಡೆಯುವ ಚಿತ್ರವನ್ನು ಬಳಸಿ ಈ ಮೀಮ್ಸ್ಗಳನ್ನು ಹರಿಬಿಡಲಾಗಿದೆ. ಈ ಫೋಟೋಗಳನ್ನು ಯಾರು ಹರಿಬಿಟ್ಟಿದ್ದಾರೋ ನನಗೆ ಗೊತ್ತಿಲ್ಲ. ಆದರೆ, ನೋಡಲು ತುಂಬಾ ತಮಾಷೆಯಾಗಿವೆ. ವೈರಲ್ ಆಗಿರುವ ಫೋಟೋಗಳಲ್ಲಿ ಇವು ನನ್ನ ಕೆಲವು ಮೆಚ್ಚಿನವುಗಳು ಎಂದು ಶಶಿ ತರೂರ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.

ಅಂದಹಾಗೆ ತರೂರ್ ಅವರು ಹಿಡುಗಾಯಿ ಒಡೆಯುತ್ತಿರುವ ಫೋಟೋವನ್ನು ಟೀ ತಯಾರಕ, ಡ್ಯಾನ್ಸರ್, ಬೌಲರ್, ಕುಸ್ತಿಪಟು ಹಾಗೂ ಜಾವೆಲಿನ್ ಥ್ರೂ ನಿರಜ್ ಚೋಪ್ರಾ ರೀತಿ ಮೀಮ್ಸ್ ಮಾಡಿ ಹರಿಬಿಟ್ಟಿದ್ದಾರೆ.
ಮೀಮ್ಸ್ ಫೋಟೋಗಳನ್ನು ಸ್ವಲ್ಪವೂ ಸಂಕೋಚ ಪಟ್ಟುಕೊಳ್ಳದೇ ತಮ್ಮ ಫೇಸ್ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಶಶಿ ತರೂರ್ ಅವರ ಕ್ರೀಡಾ ಮನೋಭಾವ ಹಾಗೂ ಹಾಸ್ಯ ಪ್ರಜ್ಞೆಗೆ ನೆಟ್ಟಿಗರು ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೇ ಮೀಮ್ಸ್ಗಳನ್ನು ಮಾಡಿರುವ ಟ್ರೋಲಿಗರು ಸೃಜನಾತ್ಮಕತೆಗೂ ಬಹುಪರಾಕ್ ಹೇಳಿದ್ದಾರೆ.