Connect with us

  BANTWAL

  ಬಂಟ್ವಾಳ ಅಕ್ರಮ ಮರಳು, ಲಾರಿ ಪೊಲೀಸ್ ವಶಕ್ಕೆ..!

  ಬಂಟ್ವಾಳ: ಬಂಟ್ವಾಳ ಸಜೀಪದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿ ಹಾಗೂ ಮರಳನ್ನು ಪೋಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.


  ಸಜೀಪದಿಂದ ಚೇಳೂರು ಕಡೆಗೆ ಲಾರಿ ಸಾಗುತ್ತಿರುವ ವೇಳೆ ಪೋಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
  ಪೋಲೀಸರು ವಶಪಡಿಸಿಕೊಂಡ ಲಾರಿ ಮತ್ತು ಮರಳಿನ ಮೌಲ್ಯ ಒಟ್ಟು 2 ಲಕ್ಷ 5 ಸಾವಿರ ಎಂದು ಅಂದಾಜಿಸಲಾಗಿದೆ.
  ಸಜೀಪ ಹೊಳೆಬದಿಯಲ್ಲಿ ಅಬ್ದುಲ್ ರಹಮಾನ್ ಎಂಬವರು ಮರಳುಗಾರಿಕೆ ‌ನಡೆಸುತ್ತಿದ್ದು,ಅವರು ಲಾರಿಗೆ ಲೋಡ್ ಮಾಡಿ ಕಳುಹಿಸಿದ ಬಗ್ಗೆ ಲಾರಿ ಚಾಲಕ ಮಹಮ್ಮದ್ ಶಾಫಿ ಪೋಲೀಸರಿಗೆ ತಿಳಿಸಿದ್ದಾನೆ.
  ಪರವಾನಿಗೆ ರಹಿತವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿ ಸಹಿತ ಚಾಲಕನ ಮೇಲೆ ಪ್ರಕರಣ ದಾಖಲಾಗಿದೆ

  Share Information
  Advertisement
  Click to comment

  You must be logged in to post a comment Login

  Leave a Reply