MANGALORE
ಮೀನುಲಾರಿಯಲ್ಲಿ ಅಕ್ರಮ ಮರಳು ಸಾಗಾಟಕ್ಕೆ ಯತ್ನ – ಲಾರಿ ವಶ
ಮೀನುಲಾರಿಯಲ್ಲಿ ಅಕ್ರಮ ಮರಳು ಸಾಗಾಟಕ್ಕೆ ಯತ್ನ – ಲಾರಿ ವಶ
ಮಂಗಳೂರು ಮಾರ್ಚ್ 24: ಮೀನು ಸಾಗಾಟ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಿಸಲು ಪ್ರಯತ್ನಿಸುತ್ತಿದ್ದ ಲಾರಿಯನ್ನು ಉಳ್ಳಾಲ ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಎಂಬಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡಲು ಮೀನು ಸಾಗಾಟದ ಲಾರಿಯಲ್ಲಿ ತುಂಬಿಸಿಟ್ಟಿದ್ದರು. ಈ ಕುರಿತ ಖಚಿತ ಮಾಹಿತಿಯ ಮೇರೆಗ ದಾಳಿ ಮಾಡಿದ ಉಳ್ಳಾಲ ಪೊಲೀಸರು ಕಂಟೈನರ್ ಲಾರಿ ಮತ್ತು ಸ್ಥಳದಲ್ಲಿ ಮರಳನ್ನು ವಶಕ್ಕೆ ಪಡೆದಿದ್ದಾರೆ. ಮರಳನ್ನು ಮೀನು ಸಾಗಾಟದ ಲಾರಿಯಲ್ಲಿ ಅಕ್ರಮವಾಗಿ ಕೇರಳಕ್ಕೆ ಸಾಗಿಸಲು ಪ್ರಯತ್ನಿಸಲಾಗುತ್ತಿತ್ತು ಎಂದು ಹೇಳಲಾಗಿದೆ. 4 ಯುನಿಟ್ ಮತ್ತು ಕಂಟೈನರ್ ಲಾರಿ, ಟಿಪ್ಪರ್ ಲಾರಿಯನ್ನು, ಮರಳನ್ನು ವಶಪಡಿಸಿಕೊಂಡಿರುತ್ತಾರೆ. ಸ್ವಾಧೀನಪಡಿಸಿಕೊಂಡಿರುವ ಮರಳು ಹಾಗೂ ವಾಹನಗಳ ಅಂದಾಜು ಒಟ್ಟು ಮೌಲ್ಯ ರೂ.15,00,000/- ಆಗಿರುತ್ತದೆ.
You must be logged in to post a comment Login