LATEST NEWS
ಮಂಗಳೂರು ವಿಮಾನ ನಿಲ್ದಾಣದಲ್ಲಿ 70 ಲಕ್ಷದ ಅಕ್ರಮ ಚಿನ್ನ ವಶಕ್ಕೆ…!!

ನ.18ರಂದು ಅಧಿಕಾರಿಗಳು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ IX 814 ಮೂಲಕ ದುಬೈನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಚೆಕ್-ಇನ್ ಬ್ಯಾಗೇಜ್ ಸ್ಕ್ಯಾನ್ ಮಾಡುವಾಗ, ಕೆಲವು ಕಪ್ಪು ಚಿತ್ರಗಳು ಭಾರೀ ಲೋಹದ ಇರುವಿಕೆಯನ್ನು ಸೂಚಿಸುವ ವಸ್ತುಗಳು ಕಂಡುಬಂದಿವೆ.
ಪರಿಶೀಲನೆ ನಡೆಸಿದಾಗ ಎರಡು ಕಾರ್ ಸ್ಪೀಕರ್ ಗಳಲ್ಲಿ 2 ವೃತ್ತಾಕಾರದ ತುಂಡುಗಳು, ಏರ್‌ಪಾಡ್ ನಲ್ಲಿ 2 ಆಯತಾಕಾರದ ಕಟ್ ತುಂಡುಗಳು ಮತ್ತು ಪವರ್ ಅಡಾಪ್ಟರ್ ನಲ್ಲಿ ಒಂದು ಆಯತಾಕಾರದ ತುಂಡು ಚಿನ್ನ ಪತ್ತೆಯಾಗಿದೆ. 51,84,850 ರೂ ಮೌಲ್ಯದ 857 ಗ್ರಾಂ 24 ಕ್ಯಾರೆಟ್ ಶುದ್ಧತೆಯ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ ಎಂದು ತಿಳಿದು ಬಂದಿದೆ.
Continue Reading