Connect with us

BELTHANGADI

ಐಷಾರಾಮಿ ಕಾರಿನಲ್ಲಿ ಅಕ್ರಮ ದನ ಸಾಗಾಟ ಪತ್ತೆ

ಐಷಾರಾಮಿ ಕಾರಿನಲ್ಲಿ ಅಕ್ರಮ ದನ ಸಾಗಾಟ ಪತ್ತೆ

ಬೆಳ್ತಂಗಡಿ ಜೂನ್ 7: ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಪರಶುರಾಮ ದೇವಸ್ಥಾನದ ಚಾರ್ಮಾಡಿ ರಸ್ತೆ ತಿರುವಿನಲ್ಲಿ ಅಪಘಾತಕ್ಕೀಡಾದ ಐಷಾರಾಮಿ ಕಾರಿನಲ್ಲಿ ಅಕ್ರಮ ಹಸು ಸಾಗಾಟ ಪತ್ತೆಯಾಗಿದೆ.

ಅಕ್ರಮವಾಗಿ ಕಸಾಯಿಖಾನೆ ಸಾಗಾಟ ಮಾಡಲು ಸುಮಾರು 6 ದನಗಳನ್ನು ಈ ಐಷಾರಾಮಿ ಕಾರಿನಲ್ಲಿ ತುಂಬಿಸಲಾಗಿತ್ತು. ಆದರೆ ಪರಶುರಾಮ ದೇವಸ್ಥಾನದ ಚಾರ್ಮಾಡಿ ರಸ್ತೆ ತಿರುವಿನಲ್ಲಿ ಕಾರು ಅಪಘಾತಕ್ಕೀಡಾಗಿದೆ. ಕಾರಿನಲ್ಲಿದ್ದ 5 ಹಸುಗಳ ಸಾವು, ಒಂದು ಹಸುವಿನ ಗಂಭೀರವಾಗಿದೆ.

ಈ ವಾಹನ ಬರುವ ದಾರಿಯಲ್ಲಿ ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆಯ ತಪಾಸಣೆ ಮಾಡುವ 2 ಗೇಟ್ ಗಳು ಇದೆ. ಜನ ಸಾಮಾನ್ಯರು ಓಡಾಡುವ ಕಾರಿನಲ್ಲಿ ಬಾಯಿ ಬರದ ಮೂಕ ಪ್ರಾಣಿಗಳನ್ನು ಸಾಗಿಸುವಾಗ ಇಲ್ಲಿನ ಗೇಟ್ ಕಾಯುತ್ತಿದ ಅಧಿಕಾರಿಯವರು ಏನು ಮಾಡುತ್ತಿದ್ದರು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Facebook Comments

comments