LATEST NEWS
ಇಂಜಿನಿಯರಿಂಗ್ ವಿಧ್ಯಾರ್ಥಿ ವಿನಾಯಕ್ ನಾಪತ್ತೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್
ಇಂಜಿನಿಯರಿಂಗ್ ವಿಧ್ಯಾರ್ಥಿ ವಿನಾಯಕ್ ನಾಪತ್ತೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್
ಮಂಗಳೂರು ನವೆಂಬರ್ 29: ಇಂಜಿನಿಯರಿಂಗ್ ವಿಧ್ಯಾರ್ಥಿ ವಿನಾಯಕ್ ನಾಪತ್ತೆ ಪ್ರಕರಣಕ್ಕೆ ಪ್ರಮುಖ ತಿರುವು ಸಿಕ್ಕಿದೆ. ಮಾಜಿ ಪೊಲೀಸ್ ಅಧಿಕಾರಿ ಮದನ್ ಅವರೊಂದಿಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ವಿನಾಯಕ್ ನಾಪತ್ತೆಯಾಗಲು ಮದನ್ ಮಹಿಳೆಯೊಬ್ಬರ ಜೊತೆ ಹೊಂದಿದ್ದ ಅಕ್ರಮ ಸಂಬಂಧವೇ ತಮ್ಮ ಮಗ ನಾಪತ್ತೆಗೆ ಪ್ರಮುಖ ಕಾರಣ ಎಂದು ವಿನಾಯಕ ನ ಪೋಷಕರು ಆರೋಪಿಸಿದ್ದಾರೆ.
ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪಿಎಸ್ಐ ಹುದ್ದೆಯನ್ನು ತ್ಯಜಿಸಿದ್ದ ಮದನ್ ನ ಚುನಾವಣಾ ಕಣಕ್ಕಿಳಿದಿದ್ದರು. ಪ್ರಚಾರದ ವೇಳೆ ಒಂದಷ್ಟು ಯುವಕರು ಮದನ್ ಜೊತೆಗೆ ನಿಂತು ಕೆಲಸ ಮಾಡಿದ್ದರು. ಅದರಲ್ಲಿ ಮಂಗಳೂರಿನ ಶಕ್ತಿನಗರದ ನಿವಾಸಿ, ಇಂಜಿನಿಯರಿಂಗ್ ಸ್ಟೂಡೆಂಟ್ ವಿನಾಯಕನೂ ಒಬ್ಬ. ಚುನಾವಣೆ ನಂತ್ರ ಓದನ್ನು ಬಿಟ್ಟು ಮದನ್ ಜೊತೆಗೇ ನೆಲೆಸಿದ್ದ ವಿನಾಯಕ್, ಅಕ್ಟೋಬರ್ 8ರ ಬಳಿಕ ನಾಪತ್ತೆಯಾಗಿದ್ದ.
ಈ ನಡುವೆ ನಾಪತ್ತೆ ಗೂ ಮುನ್ನ ಮದನ್ ಮಹಿಳೆಯೊಂದಿಗೆ ಹೊಂದಿದ್ದ ಸಂಬಂಧ ಕುರಿತು ವಿನಾಯಕ ತನ್ನ ತಾಯಿ ಬಳಿ ಹೇಳಿಕೊಂಡಿದ್ದ. ಅನೈತಿಕ ಸಂಬಂಧ ವಿಚಾರ ಹೊರಬರುತ್ತೆ ಅನ್ನುವ ಭಯದಿಂದ ಮದನ್ ಮತ್ತು ಆತನ ಜೊತೆಗಿದ್ದ ಮಹಿಳೆ ಸೇರಿ ಮಗನನ್ನು ಏನೋ ಮಾಡಿದ್ದಾರೆಂದು ವಿನಾಯಕನ ಹೆತ್ತವರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ನಡುವೆ, ಮದನ್ ಜೊತೆಗಿದ್ದ ಮಹಿಳೆಯ ಬಗ್ಗೆ ಸಂಶಯಗೊಂಡ ಹೆತ್ತವರು, ಅವರಿಬ್ಬರ ಅನೈತಿಕ ಸಂಬಂಧ ಹೊರಬರುತ್ತೆ ಅಂತ ತಮ್ಮ ಮಗನನ್ನು ಅಪಹರಿಸಿದ್ದಾರೆಂದು ದೂರು ಕೊಟ್ಟಿದ್ದರು. ಆದರೆ, ಈ ಬಗ್ಗೆ ಪೊಲೀಸರು ಹೆಚ್ಚು ಮುತುವರ್ಜಿ ವಹಿಸಿರಲಿಲ್ಲ. ಹೈಕೋರ್ಟಿನಲ್ಲಿ ಈ ಬಗ್ಗೆ ಪ್ರಶ್ನೆ ಬಂದಾಗ, ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಮಹಿಳೆಯ ವಿಚಾರಣೆಗೆ ಅನಾರೋಗ್ಯದ ಕಾರಣ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಎರಡು ತಿಂಗಳಾದ್ರೂ ಸುಳಿವು ಪತ್ತೆ ಮಾಡದ ಪೊಲೀಸರ ತನಿಖೆ ಬಗ್ಗೆ ಹೆತ್ತವರು ಸಂಶಯ ವ್ಯಕ್ತಪಡಿಸಿದ್ದು ಅನೈತಿಕ ಸಂಬಂಧ ಕಾರಣಕ್ಕೆ ತಮ್ಮ ಮಗನನ್ನು ಮುಗಿಸಿರುವ ಸಾಧ್ಯತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.