LATEST NEWS
ಅಕ್ರಮ 1 ಕೋಟಿ ಹಣ ಸಾಗಾಟ ; ಕಾರಿನೊಂದಿಗೆ ಮೂವರ ಬಂಧನ
ಅಕ್ರಮ 1 ಕೋಟಿ ಹಣ ಸಾಗಾಟ ; ಕಾರಿನೊಂದಿಗೆ ಮೂವರ ಬಂಧನ
ಮಂಗಳೂರು, ಡಿಸೆಂಬರ್ 08 : ಕಾರಿನಲ್ಲಿ ಯಾವುದೇ ದಾಖಲೆಗಳಿಲ್ಲದೆ ಹಣ ಸಾಗಾಟ ಮಾಡುತ್ತಿದ್ದ ಮೂವರನ್ನು ಮಂಗಳೂರು ಕಂಕನಾಡಿ ನಗರ ಪೋಲಿಸರು ಬಂಧಿಸಿದ್ದಾರೆ.
ಡಿಸೆಂಬರ್ 8 ರಂದು ಮಧ್ಯ ರಾತ್ರಿ ಗಸ್ತಿನಲ್ಲಿದ್ದ ಠಾಣಾಧಿಕಾರಿ ರವಿ ನಾಯ್ಕ್ kA 10 -CA- 9908 ನಂಬರಿನ ಹುಂಡೈ ಕಾರನ್ನು ತಡೆದು ಪರಿಶೀಲನೆ ನಡೆಸಿದಾಗ ಈ ಕಾರಿನಲ್ಲಿ ಒಂದು ಕೋಟಿ ಅಕ್ರಮ ಹಣ ಇರುವುದು ಪತ್ತೆಯಾಗಿದೆ.
ಈ ಹಣದ ಬಗ್ಗೆ ಯಾವುದೇ ದಾಖಲೆಗಳು ನೀಡಲು ವಿಫಲರಾದ ಹಿನ್ನೆಲೆಯಲ್ಲಿ ಕಾರು, ಒಂದು ಕೋಟಿ ನಗದು ಹಣವನ್ನು ಪೋಲಿಸರು ವಶಪಡಿಸಿಗೊಂಡಿದ್ದಾರೆ.
ಈ ಸಂಬಂಧ ಮಹಾರಾಷ್ಟ್ರದ ತಾನಾಜಿ, ಬೆಳಗಾವಿಯ ದಿನೇಶ್, ಹಾಗೂ ಮಹಾರಾಷ್ಟ್ರ ಸಾಂಗ್ಲಿಯ ಅಮುಲ್ ಮಾಲಿ ಅವರನ್ನು ಬಂಧಿಸಿದ್ದಾರೆ.
You must be logged in to post a comment Login