Connect with us

KARNATAKA

ಪಾವಗಡ – ಖಾಸಗಿ ಬಸ್ ಪಲ್ಟಿ 8ಕ್ಕೂ ಅಧಿಕ ಮಂದಿ ಸಾವು

ತುಮಕೂರು : ಓವರ್ ಲೋಡ್ ಆಗಿದ್ದ ಖಾಸಗಿ ಬಸ್ ಒಂದು ಪಲ್ಟಿಯಾದ ಕಾರಣ ಸ್ಥಳದಲ್ಲೆ 8 ಮಂದಿ ಸಾವನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆಯ ಬಳಿ ನಡೆದಿದೆ.


ಖಾಸಗಿ ಎಸ್​ವಿಟಿ ಬಸ್ ನಲ್ಲಿ ಓವರ್ ಲೋಡ್ ಆಗಿ ಪ್ರಯಾಣಿಕರು ಹತ್ತಿಸಿಕೊಂಡಿದ್ದು, ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ ಎಂದು ಹೇಳಲಾಗಿದೆ. ಈ ಘಟನೆಯಲ್ಲಿ 8 ಮಂದಿ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಸಾವನಪ್ಪಿದವರಲ್ಲಿ ವಿಧ್ಯಾರ್ಥಿಗಳೇ ಹೆಚ್ಚು ಎಂದು ಹೇಳಲಾಗಿದೆ.

ಬಸ್‌ನಲ್ಲಿದ್ದ 25ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಸ್ಥಳಕ್ಕೆ ಎಸ್​ಪಿ ರಾಹುಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *