DAKSHINA KANNADA
ಹಂದಿ ಮಾಂಸ ತಿನ್ನಿಸಿ, ಭಜರಂಗದಳ ಸವಾಲ್

ಹಂದಿ ಮಾಂಸ ತಿನ್ನಿಸಿ, ಭಜರಂಗದಳ ಸವಾಲ್
ಪುತ್ತೂರು,ಸೆಪ್ಟಂಬರ್ 25: ಗೋ ಮಾಂಸ ಮತ್ತು ಹಂದಿ ಮಾಂಸ ಎರಡೂ ಒಂದೇ ಆಗಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ ಕಾಗೋಡು ತಿಮ್ಮಪ್ಪ ಜನತೆಯ ಕ್ಷಮೆಯಾಚಿಸಬೇಕು ಎಂದು ಭಜರಂಗದಳ ಆಗ್ರಹಿಸಿದೆ.ಪುತ್ತೂರಿನಲ್ಲಿ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಮಾತನಾಡಿದ ಭಜರಂಗದಳದ ಮುಖಂಡ ಮುರಳೀಕೃಷ್ಣ ಹಸಂತಡ್ಕ ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ಗೋವಿನ ವಿಚಾರವನ್ನು ಪ್ರಸ್ತಾಪಿಸುವ ಮೂಲಕ ಸಚಿವರು ಹಿಂದುಗಳಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.
ಕಾಗೋಡು ತಿಮ್ಮಪ್ಪ ನಾನು ಗೋಮಾಂಸ ತಿಂದಿದ್ದೇನೆ, ಎಲ್ಲರೂ ಗೋಮಾಂಸ ತಿನ್ನಬಹುದು ಎಂದು ಕರೆ ನೀಡುವ ಸಚಿವರು ತಾಕತ್ತಿದ್ದರೆ ಹಂದಿ ಮಾಂಸವನ್ನೂ ಎಲ್ಲರೂ ತಿನ್ನಬೇಕು ಎನ್ನುವ ಕರೆಯನ್ನೂ ನೀಡಲಿ ಎಂದು ಸವಾಲೆಸಿದರು.

ಕಾಗೋಡು ತಿಮ್ಮಪ್ಪ ಜನತೆಯ ಕ್ಷಮೆಯಾಚಿಸಬೇಕು :
ಸಚಿವ ಕಾಗೋಡು ತಿಮ್ಮಪ್ಪನವರು ಕೂಡಲೇ ತಮ್ಮ ಹೇಳಿಕೆಯ ಬಗ್ಗೆ ಕ್ಷಮೆಯಾಚಿಸಬೇಕು. ಇಲ್ಲದೇ ಹೋದಲ್ಲಿ ಸಚಿವರ ವಿರುದ್ಧ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಸಿದರು.
ಮುಂದೆ ಬರುವ ದೀಪಾವಳಿಯು ಗೋ ಮಾತೆಯ ದೀಪಾವಳಿಯಂತೆ ಆಚರಿಸುವ ಅಗತ್ಯವಿದೆ ಎಂದ ಅವರು ಪ್ರತಿಯೊಬ್ಬ ಹಿಂದುವೂ ತಮ್ಮ ಗ್ರಾಮಗಳಲ್ಲಿ ದೀಪಾವಳಿಯ ದಿನ ಗೋ ಪೂಜೆಯನ್ನು ಆಚರಿಸುವಂತೆ ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು.