Connect with us

  DAKSHINA KANNADA

  ದೇಶದಲ್ಲಿ ಹಿಂದುತ್ವದ ಪರವಾಗಿ ಗಟ್ಟಿ ನಿಲ್ಲುವ ಪಕ್ಷವಿದ್ದರೆ ಅದು ಬಿಜೆಪಿ ಮಾತ್ರ: ರಘುಪತಿ ಭಟ್

  ಪುತ್ತೂರು, ಮೇ 01: ದೇಶದಲ್ಲಿ ಹಿಂದುತ್ವದ ವಿಚಾರದಲ್ಲಿ ಯಾವುದಾದರೂ ಪಕ್ಷ ಮಾತನಾಡುವುದಾದರೆ ಅದು ಬಿಜೆಪಿ ಪಕ್ಷ ಮಾತ್ರ ಎಂದು ಉಡುಪಿ ಶಾಸಕ‌ ರಘುಪತಿ ಭಟ್ ಹೇಳಿದರು.

  ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆ ಬರುವ ಸಮಯದಲ್ಲಿ ಅಸಮಾಧಾನಗಳು ಬರೋದು ಸಾಮಾನ್ಯ. ಉಪ್ಪು,ಹುಳಿ,ಖಾರ ತಿನ್ನುವ ಮನುಷ್ಯರಲ್ಲಿ ಅಸಮಾಧಾನ ಸಾಮಾನ್ಯವಾಗಿದ್ದು, ರಾಷ್ಟ್ರೀಯ ಚಿಂತನೆಗಳ ದೃಷ್ಟಿಯಿಂದ ಆ ಅಸಮಾಧಾನಗಳು ಹೋಗಬೇಕಿದೆ.

  ಪುತ್ತೂರಿನಲ್ಲಿ ನಡೆಯುತ್ತಿರುವುದು ಹಿಂದುತ್ವ ವರ್ಸಸ್ ಬಿಜೆಪಿಯಲ್ಲ ಎಂದ ಅವರು ದೇಶದಲ್ಲಿ ಹಿಂದುತ್ವದ ಪರವಾಗಿ ಗಟ್ಟಿ ನಿಲ್ಲುವ ಪಕ್ಷವಿದ್ದರೆ ಅದು ಬಿಜೆಪಿ ಮಾತ್ರ. ಹಿಂದುತ್ವ, ರಾಮಮಂದಿರ, ಗೋಹತ್ಯೆ ನಿಶೇಧ, ಮತಾಂತರ ನಿಶೇಧ ಪರವಾಗಿ ಬೇರೆ ಯಾವುದಾದರೂ ಪಕ್ಷ ಬೆಂಬಲ ನೀಡಿಲ್ಲ. ಬಿಜೆಪಿ ಪಕ್ಷ ಮಾತ್ರ ಬಹಿರಂಗವಾಗಿ ಹಿಂದುತ್ವದ ಪರವಾಗಿ ನಿಂತಿದ್ದು, ಹಿಂದುತ್ವ ಇದ್ದವರು ಬಿಜೆಪಿ ಪರ ಇರ್ತಾರೆ, ಹಿಂದುತ್ವ ಇಲ್ಲದವರು ಬಿಜೆಪಿ ವಿರುದ್ಧ ಇರ್ತಾರೆ. ಹಿಜಾಬ್ ಅನ್ನೋದು ಬಿಜೆಪಿಗೆ ಚುನಾವಣಾ ವಿಷಯವಲ್ಲ.

  ಹಿಜಾಬ್ ವಿರುದ್ಧ ಧ್ವನಿ ಎತ್ತಿರುವುದು ವಸ್ತ್ರಸಂಹಿತೆಯ ಪಾಲನೆಗಾಗಿ‌ ಮಾತ್ರ ಎಂದರು. ಕಾಂಗ್ರೇಸ್ ದಿನಕ್ಕೊಂದು ಗ್ಯಾರೆಂಟಿಯನ್ನು ಚುನಾವಣೆ‌ ಸಂದರ್ಭದಲ್ಲಿ ಘೋಷಿಸುತ್ತಿದ್ದು, ಈ ಗ್ಯಾರೆಂಟಿಗಳ ಬದಲು ಒಮ್ಮೆಲೆ ಕಾಂಗ್ರೆಸ್ ಕರ್ನಾಟಕವನ್ನು ಪಾಕಿಸ್ತಾನ, ಶ್ರೀಲಂಕಾ ಮಾಡುತ್ತೇವೆ ಎಂದು ಘೋಷಿಸಲಿ ಎಂದ ಅವರು ರಾಜ್ಯಕ್ಕೆ ಭೇಟಿ ನೀಡುವ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಭೇಟಿ ನೀಡಿದಾಗ ಈ ಘೋಷಣೆ ಮಾಡಿಲಿ. ಹೀಗೆ ಹೇಳಿದರೆ ಅವರ ಎಲ್ಲಾ ಭರವಸೆ ಈಡೇರಿದಂತಾಗುತ್ತದೆ ಎಂದ ಅವರು ಫ್ರೀ ಕೊಟ್ಟ ಶ್ರೀಲಂಕಾದ ಆರ್ಥಿಕತೆ ಹೇಗಾಗಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ.

  ಕಾಂಗ್ರೆಸ್ ಅಲ್ಪಸಂಖ್ಯಾತರ ಒಲೈಕೆ ಮಾಡಿ ಪಾಕಿಸ್ತಾನ ಮಾಡಲು ಹೊರಟಿದೆ. ಈ ಕಾರಣಕ್ಕೆ ಭರವಸೆಯ ಬದಲು ಪಾಕಿಸ್ತಾನ ಮಾಡುತ್ತೇವೆ ಎಂದು ಘೋಷಣೆ ಮಾಡಲಿ. ಕಾಂಗ್ರೆಸ್ ರಾಜ್ಯದ ಜನರನ್ನು ಮರುಳು ಮಾಡುವ ಪ್ರಯತ್ನದಲ್ಲಿದ್ದು, ಈ ಮೂಲಕ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದೆ. ಆದರೆ ಕರ್ನಾಟಕದ ಮತದಾರರು ಪ್ರಜ್ಞಾವಂತರಾಗಿದ್ದು, ಮೋದಿ ಮತ್ತು ಅಮಿತ್ ಶಾ ಮೇಲೆ ವಿಶ್ವಾಸವಿಟ್ಟಿದ್ದಾರೆ. ರಾಜ್ಯದಲ್ಲಿ ಯಾವ ಸರಕಾರವೂ ಮಾಡದ ಡೀಮ್ಡ್ ಫಾರೆಸ್ಟದ ಸಮಸ್ಯೆಯನ್ನು ಬಿಜೆಪಿ ನಿವಾರಿಸಿದ್ದು, 9.5 ಲಕ್ಷ ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಜಾಗದಲ್ಲಿ 6.5 ಲಕ್ಷ ಹೆಕ್ಟೇರ್ ಜಾಗವನ್ನು ರೈತರಿಗೆ ನೀಡಲಾಗಿದೆ ಎಂದರು.

  Share Information
  Advertisement
  Click to comment

  You must be logged in to post a comment Login

  Leave a Reply