Connect with us

KARNATAKA

ಬಿಜೆಪಿಗೆ ಬಹುಮತ ಬರದಿದ್ದರೆ ‘ಪ್ಲಾನ್ B’ ರೆಡಿ ಇದೆ ಎಂದ ಆರ್. ಅಶೋಕ್

ಬೆಂಗಳೂರು, ಮೇ 12: ರಾಜ್ಯ ವಿಧಾನಸಭೆ ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ರಾಜಕೀಯ ನಾಯಕರ ಹೇಳಿಕೆಗಳು ಕುತೂಹಲ ಮೂಡಿಸುತ್ತಿದೆ.

ಕಂದಾಯ ಸಚಿವ ಆರ್.ಅಶೋಕ್ ಇಂದು ಸುದ್ದಿಗಾರರ ಜೊತೆ ಮಾತನಾಡುತ್ತಾ , ‘ಬಿಜೆಪಿಗೆ ಬಹುಮತ ಬರದಿದ್ದರೆ ಪ್ಲಾನ್ ‘ಬಿ’ ರೆಡಿ ಇದೆ’ ಎಂದು ಹೇಳಿದ್ದಾರೆ. ”ಇನ್ನೊಂದು ವರ್ಷದಲ್ಲಿ ಲೋಕಸಭಾ ಚುನಾವಣೆ ಇದೆ. ಅದನ್ನು ಕೂಡ ಗಮನದಲ್ಲಿಟ್ಟುಕೊಂಡು ಪೂರ್ಣ ಬಹುಮತದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ತಯಾರಿ ಮಾಡುತ್ತಿದ್ದೇವೆ. ಅಕಸ್ಮಾತ್ ಬಂದಿಲ್ಲವೆಂದಾದರೆ ಬಿ ಫಾರ್ಮ್ಯುಲಾ ಕೂಡ ರೆಡಿಯಿದೆ” ಎಂದು ಹೇಳಿದ್ದಾರೆ.

‘ಸಹಜವಾಗಿ ರಾಜಕೀಯದಲ್ಲಿ ಇಂತಹ ಪ್ರಕ್ರಿಯೆಗಳು ನಡೆಯುತ್ತಿರುತ್ತವೆ. ನಾವು ರಾಜಕೀಯ ಪಕ್ಷದವರು, ಸನ್ಯಾಸಿಗಳಲ್ಲ. ಬಿ ಪ್ಲಾನ್ ಪ್ರಕಾರ ಚುನಾವಣಾ ತಂತ್ರಗಾರಿಕೆಯನ್ನು ಸಿದ್ಧಮಾಡಿದ್ದೇವೆ’ ಎಂದು ತಿಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *