Connect with us

DAKSHINA KANNADA

ಅರುಣ್ ಪುತ್ತಿಲ ಗೆದ್ದರೆ, ನಮ್ಮಂತವರ ಜೀವಕ್ಕೆ ಅಪಾಯವಿದೆ: ರವೀಂದ್ರ. ಎಂ

ಪುತ್ತೂರು, ಮೇ 05: ಚುನಾವಣೆಗೆ ಅಖಾಢ ಸಿದ್ಧವಾಗುತ್ತಿದ್ದಂತೆ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರ ವಿರುದ್ಧ ಒಂದೊಂದೇ ಆರೋಪಗಳು ಕೇಳಿ ಬರಲಾರಂಭಿಸಿದೆ. ಪುತ್ತೂರು ನರಿಮೊಗರಿನ ಮೃತ್ಯಂಜಯೇಶ್ವರ ದೇವಸ್ಥಾನದ ಅರ್ಚಕರ ಮೇಲಿನ ದೌರ್ಜನ್ಯದ ಬಳಿಕ ಇದೀಗ ಮತ್ತೊಬ್ಬರು ಪುತ್ತಿಲನ ದೌರ್ಜನ್ಯದ ಬಗ್ಗೆ ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಮುಂಡೂರು ನಿವಾಸಿ‌ ರವೀಂದ್ರ. ಎಂ ಅರುಣ್ ಪುತ್ತಿಲರಿಂದ ತಮಗಾದ ಅನ್ಯಾಯದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿ ಅರುಣ್ ಪುತ್ತಿಲ ನನ್ನ ವರ್ಗ ಜಾಗಕ್ಕೆ ತನ್ನ ಗೂಂಡಾಪಡೆ ಜೊತೆಗೆ ಬಂದು ಅಕ್ರಮ ಎಸಗಿದ್ದು, ಇದನ್ನು ತಡೆಯಲು ಹೋದ ನನ್ನ ಮೇಲೆ ಹಲ್ಲೆ ಮತ್ತು ನನ್ನ ಇಬ್ಬರು ಹೆಣ್ಣುಮಕ್ಕಳ ಮೇಲೆ ಜೆಸಿಬಿ ಹತ್ತಿಸಿ ಕೊಲೆಯತ್ನ ಮಾಡಿರುತ್ತಾರೆ. ನನ್ನ ಮೇಲೆ ಕಲ್ಲಿನ ಮೂಲಕ ಹಲ್ಲೆ ನಡೆಸಿ ನಾನು ಆಸ್ಪತ್ರ ಸೇರುವಂತೆಯೂ ಮಾಡಿದ್ದಾರೆ.

ಕಳೆದ ಹಲವು ವರ್ಷಗಳಿಂದ ಮುಂಡೂರಿನ ಉದಯಗಿರಿ ವಿಷ್ಣುಮೂರ್ತಿ ದೈವದ ಒತ್ತೆಕೋಲ ನಡೆಯುವ ಸ್ಥಳದ ಪಕ್ಕದಲ್ಲೇ ನಮ್ಮ ಪಟ್ಟಾ ಜಮೀನಿದ್ದು, ಬಹುಕಾಲದಿಂದಲೇ ನಮ್ಮ ಮನೆಯವರೇ ಶ್ರೀ ದೈವದ ಸೇವೆಗಳನ್ನು ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ಹೊಸ ಸಮಿತಿ ರಚನೆಯಾಗಿ ಊರಿನ ಕೆಲವು ವ್ಯಕ್ತಿಗಳು ನಮ್ಮ ಜಮೀನನ್ನು ಅತಿಕ್ರಮ ಪ್ರವೇಶ ಮಾಡಿದಾಗ ನಾನು ಮಾನ್ಯ ನ್ಯಾಯಾಲಯದಿಂದ ಇಂಜಕ್ಷನ್ ಆದೇಶ ಪಡೆದಿದ್ದೇನೆ. ಆದಾಗ್ಯೂ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅಕ್ರಮವಾಗಿ ನಮ್ಮ ಜಮೀನಿಗೆ ಪ್ರವೇಶ ಮಾಡಿ ದೌರ್ಜನ್ಯ ನಡೆಸಿದ್ದಾರೆ.

ಈ ಕುರಿತು ಸಂಪ್ಯ ಪೋಲೀಸ್ ಠಾಣೆಗೆ ಐದು ಬಾರಿ ದೂರು ನೀಡಿದರೂ,ತನ್ನ ಪ್ರಭಾವ ಬಳಸಿ ನೀಡಿದ ದೂರಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಘಟನೆಯ ಕುರಿತ ಎಲ್ಲಾ ಸಿಸಿ ಕ್ಯಾಮಾರಾ ಫುಟೇಜ್ ಗಳು ನನ್ನ ಬಳಿಯಿದ್ದರೂ, ಅರುಣ್ ಪುತ್ತಿಲ ಮತ್ತು ಅವರ ಗೂಂಡಾಪಡೆ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಆ ಬಳಿಕ ನಾನು ನ್ಯಾಯಾಲಯದ ಮೊರೆ ಹೋಗಿ ಆತನ ವಿರುದ್ಧ 107, 14,1 , 144, q 148, 120 C, 504, 506,447,307,149 of IPC, in No. 6/2023 in crime No.30/2023 FIR dated 25/3/2023 ಅಡಿ ಕೇಸು ದಾಖಲಾಗಿದೆ.

ಅರುಣ್ ಪುತ್ತಿಲರಿಂದ ಈಗಲೂ ನಮಗೆ ಜೀವಭಯವಿದ್ದು, ಈ ವ್ಯಕ್ತಿ ಚುನಾವಣೆಯಲ್ಲಿ ಒಂದು ವೇಳೆ ಗೆದ್ದಲ್ಲಿ, ನಮ್ಮಂತವರ ಜೀವಕ್ಕೆ ಅಪಾಯವಿದೆ. ಘಟನೆಗೆ ಸಂಬಂಧಿಸಿದಂತೆ ನಾನು ಬಿಲ್ಲವ ಸಂಘಕ್ಕೂ ಮನವಿ ಮಾಡಿ ನನಗೆ ನ್ಯಾಯಕೊಡುವಂತೆ ಆಗ್ರಹಿಸಿದರೂ, ಯಾರೂ ನನ್ನ ಸಹಾಯಕ್ಕೆ ಬಂದಿಲ್ಲ ಎಂದು ಅವರು ಆರೋಪಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *