FILM
ಒಂದು ತಿಂಗಳ ಕಾಲ 15 ಜನ ನಿರಂತರವಾಗಿ ಅತ್ಯಾಚಾರ ಎಸಗಿದರೆ, ಹೇಗೆ ತಾನೆ ಪುರಾವೆ ನೀಡುತ್ತಾರೆ?

ಮುಂಬೈ ಮೇ 19: ಭಾರೀ ವಿವಾದದ ನಡುವೆಯು ಭರ್ಜರಿ ಸೂಪರ್ ಹಿಟ್ ಆಗಿರುವ ದಿ ಕೇರಳ ಸ್ಟೋರಿ ಚಿತ್ರವು ಇದೀಗ ವಿದೇಶದಲ್ಲೂ ಭರ್ಜರಿ ಸದ್ದು ಮಾಡುತ್ತಿದೆ. ಗುರುವಾರ ದಿ ಕೇರಳ ಸ್ಟೋರಿ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ನಟಿ ಅದಾ ಶರ್ಮಾ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಸಿನಿಮಾದಲ್ಲಿ ಬರುವ ʻನಿಮಾʼ ಪಾತ್ರವು ತನ್ನ ಮೇಲೆ ಪ್ರತಿದಿನ 15-20 ಜನರಿಂದ ಅತ್ಯಾಚಾರ ಎಸಗಿರುವ ಬಗ್ಗೆ ಕೇಸ್ ದಾಖಲಿಸಲು ಪ್ರಯತ್ನಿಸುತ್ತದೆ. ಆದರೆ ಅವಳ ಬಳಿ ಸಾಕ್ಷಿಗಳನ್ನು ಕೇಳಿದಾಗ ಆಕೆ ಹೇಗೆ ಅದನ್ನ ಪ್ರೂವ್ ಮಾಡುತ್ತಾಳೆ? ಒಂದು ತಿಂಗಳ ಕಾಲ 15 ಜನ ನಿರಂತರವಾಗಿ ಅತ್ಯಾಚಾರ ಎಸಗಿದರೆ, ಹೇಗೆ ತಾನೆ ಪುರಾವೆ ನೀಡುತ್ತಾರೆ? ಪ್ರೀತಿಯಲ್ಲಿ ದ್ರೋಹ ಬಗೆದರೆ ಕೇಸ್ ದಾಖಲಿಸುವುದು ಹೇಗೆ? ಅದನ್ನು ಬರವಣಿಗೆಯಲ್ಲಿ ಬರೆದುಕೊಡಲಾಗುತ್ತದೆಯೇ? ಈ ರೀತಿ ನನ್ನನ್ನ ಅತ್ಯಾಚಾರ ಮಾಡಿದ್ದಾರೆ ಅಂತಾ ಹೇಳಲಾಗುತ್ತದೆಯೇ? ಎಂದು ಮರು ಪ್ರಶ್ನೆ ಮಾಡಿದರು.

ಇದೇ ವೇಳೆ ಕೇರಳದ ಎರ್ನಾಕುಲಂನ ಆರ್ಷ ವಿದ್ಯಾ ಸಮಾಜಂ ಆಶ್ರಮದಿಂದ ಮತಾಂತರಕ್ಕೆ ಗುರಿಯಾದ 26 ಸಂತ್ರಸ್ತ ಯುವತಿಯರನ್ನ ಮಾಧ್ಯಮಗಳ ಮುಂದೆ ಕರೆತಂದಿದ್ದರು. ಜೊತೆಗೆ ಚಿತ್ರದಿಂದ ಬಂದ ಲಾಭದಲ್ಲಿ 51 ಲಕ್ಷ ರೂ.ಗಳನ್ನ ಆಶ್ರಮಕ್ಕೆ ಮಹಿಳೆಯರ ಶಿಕ್ಷಣ ಮತ್ತು ಉನ್ನತಿಗಾಗಿ ದೇಣಿಗೆ ನೀಡಿದರು.