KARNATAKA
ವಿರೋಧಿಗಳ ಮಣಿಸಲು ಬಾಡಿಗೆ ಟ್ರೋಲರ್ ಗಳ ಮೊರೆ ಹೋದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ…!!
ಬೆಂಗಳೂರು: ಕರ್ನಾಟಕದಲ್ಲಿ ಐಎಎಸ್ ಐಪಿಎಸ್ ಅಧಿಕಾರಿಗಳ ನಡುವಿನ ಕಿತ್ತಾಟ ಮುಂದುವರೆದಿದ್ದು, ಇದೀಗ ರೋಹಿಣಿ ಸಿಂಧೂರಿ ಅವರ ಬಗ್ಗೆ ಮಹತ್ವದ ಮಾಹಿತಿಯೊಂದನ್ನು ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ವಿರೋಧಿಗಳ ಬಾಯಿ ಮುಚ್ಚಿಸಲು ಬಾಡಿಗೆ ಟ್ರೋಲರ್ ಗಳನ್ನು ಐಎಎಸ್ ಅಧಿಕಾರಿ ರೋಹಿಣಿ ಬಳಸುತ್ತಿದ್ದಾರೆ ಎಂಬ ಆರೋಪ ಮಾಡಿದ್ದು, ಅದಕ್ಕೆ ಸಂಬಂಧಿಸಿದ ಸ್ಕ್ರೀನ್ ಶಾಟ್ ಗಳನ್ನು ಶೇರ್ ಮಾಡಿದ್ದಾರೆ.
ಜುಲೈ 3ರ ರಾತ್ರಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ರೂಪಾ, ವ್ಯಕ್ತಿಯೊಬ್ಬರು ತಮ್ಮೊಂದಿಗೆ ಜೂನ್ 25ರಂದು ವಾಟ್ಸ್ ಆ್ಯಪ್ ಮೂಲಕ ನಡೆಸಿದ ಸಂಭಾಷಣೆಯ ವಿವರಗಳನ್ನು ಹಂಚಿಕೊಂಡಿದ್ದಾರೆ. ಪಿ.ಆರ್ ಏಜೆನ್ಸಿಯೊಂದರ ಮಾಜಿ ಉದ್ಯೋಗಿ ಎಂದು ಪರಿಚಯಿಸಿಕೊಂಡಿರುವ ಆ ವ್ಯಕ್ತಿ, ರೋಹಿಣಿ ಸಿಂಧೂರಿ ಮತ್ತು ಅವರ ಪತಿ ಬಾಡಿಗೆ ಟ್ರೋಲರ್‌ಗಳ ನೆರವು ಪಡೆದು ವಿರೋಧಿಗಳನ್ನು ಮಣಿಸುತ್ತಾರೆ ಎಂದು ಹೇಳಿರುವ ಸಂದೇಶವನ್ನು ರೂಪಾ ಬಹಿರಂಗಪಡಿಸಿದ್ದಾರೆ.
ನಾನು ಒಂದು ಪಿ.ಆರ್ ಏಜೆನ್ಸಿಯಲ್ಲಿ ಹಿಂದೆ ಉದ್ಯೋಗಿಯಾಗಿದ್ದೆ.ಸಿಂಧೂರಿ ಅವರ ಪತಿ ಒಂದು ವರ್ಷದಿಂದ ಆ ಏಜೆನ್ಸಿಯ ಸೇವೆ ಪಡೆಯುತ್ತಿದ್ದಾರೆ. ತಮ್ಮ ವಿರೋಧಿಗಳ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡಲು ಬಳಸಿಕೊಳ್ಳುತ್ತಿದ್ದಾರೆ.ರೋಹಿಣಿ ಅವರ ವಿರುದ್ಧ ಮಾತನಾಡುವವರ ವಿರುದ್ಧ ಕೆಟ್ಟದಾಗಿ ದಾಳಿ ಮಾಡಿಸುತ್ತಿದ್ದಾರೆ. ನೀವು ಅವರ ತಂಟೆಗೆ ಹೋಗ ಬೇಡಿ. ಸುಮ್ಮನಿದ್ದುಬಿಡಿ ಮೇಡಂ’ ಎಂದು ಆ ವ್ಯಕ್ತಿ ಸಲಹೆ ನೀಡಿರುವುದನ್ನು ರೂಪಾ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ.
ರೋಹಿಣಿ ಅವರನ್ನು ಟೀಕಿಸುವವರ ವಿರುದ್ಧ ದಾಖಲಾಗುವ ಪ್ರತಿಕ್ರಿಯೆಗಳು ಬಾಡಿಗೆ ಟ್ರೋಲರ್‌ಗಳಿಂದ ಬರುತ್ತಿವೆ. ನಾನು ಕೂಡ ಆ ಸಂಸ್ಥೆಯಲ್ಲಿ ಕೆಲಕಾಲ ಕೆಲಸ ಮಾಡಿ ದ್ದೇನೆ. ಈಗಲೂ ಆ ರೀತಿ ಬಳಕೆಯಾಗುತ್ತಿರುವುದನ್ನು ಅಲ್ಲಿರುವ ನನ್ನ ಸ್ನೇಹಿತರು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಸಂಭಾಷಣೆ 25 ನೇ ಜೂನ್ ನಡೆದದ್ದು. ಸಂಭಾಷಣೆ ಸ್ವಯಂ ವೇದ್ಯ. ನನಗೆ ಹೆಚ್ಚಾಗಿ ತಿಳಿಯದ ಈ ವ್ಯಕ್ತಿ ಹೇಳಿದ್ದು ನಿಜ ಇದ್ದರೆ, ಅಂದರೆ, ನಾನು ಹಾಕುವ ನನ್ನ ಅಭಿಪ್ರಾಯಕ್ಕೆ paid trolls ಗಳು ನಕಾರಾತ್ಮಕವಾಗಿ,. ಅನಾಗರಿಕ ರೀತಿಯಲ್ಲಿ ಪ್ರತಿಕ್ರಿಯಿಸಿದರ ಹಿಂದೆ ಅಂಥವರ ವಿಕೃತ ಮನೋಭಾವ ಎದ್ದು ತೋರುತ್ತದೆ. ಸತ್ಯ ಹೇಳೋಕೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಡ.ಹಾಗೆ, paid trolls ಗಳು ಒಬ್ಬ ಅಧಿಕಾರಿಯ ಪರ ಕೆಲಸ ಮಾಡುತ್ತಾ, ಇನ್ನೊಬ್ಬ ಅಧಿಕಾರಿಯ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದು ” ಹೊಸ ಸಾಮಾನ್ಯ?”. New normal’? Sad. ಆದರೆ, ಆ ಪೇಯ್ಡ್/ ಬಾಡಿಗೆ ಟ್ರೊಲ್ ಗಳಿಗೆ ಗೊತ್ತಿಲ್ಲವೆ… ನಾಯಿ ಬೊಗಳಿದರೆ ಅಂಬಾರಿ ಹೋಗೋದು ನಿಲ್ಲಲ್ಲ.
ಹಾಗೇ ಈ ವ್ಯಕ್ತಿ ಹೇಳಿದ ವಿಷಯ ಸತ್ಯವೇ, ತನಿಖೆ ಆಗಲಿ ಎಂದಿದ್ದಾರೆ.