LATEST NEWS
ಭಾರತೀಯ ವಾಯುಸೇನೆಗೆ ಆನೆಬಲ ತರುವ ರಫೇಲ್ ಅಧಿಕೃತವಾಗಿ ವಾಯುಸೇನೆಗೆ ಸೇರ್ಪಡೆ…
ಭಾರತೀಯ ವಾಯುಸೇನೆಗೆ ಆನೆಬಲ ತರುವ ರಫೇಲ್ ಅಧಿಕೃತವಾಗಿ ವಾಯುಸೇನೆಗೆ ಸೇರ್ಪಡೆ…
ಅಂಬಾಲ, ಸೆಪ್ಟಂಬರ್ 10: ಭಾರತ ಮತ್ತು ಚೀನ ನಡುವೆ ಗಡಿ ವಿವಾದ ತಾರಕಕ್ಕೇರಿರುವ ಸಂದರ್ಭದಲ್ಲೇ ಭಾರತೀಯ ವಾಯುಸೇನೆ ವಿಶ್ವದ ಅತ್ಯಂತ ಪ್ರಭಾವಿ ಯುದ್ಧ ವಿಮಾನ ರಫೇಲ್ ವಿಮಾನಗಳನ್ನು ಸೇನೆಗೆ ಸೇರ್ಪಡೆಗೊಳಿಸುವ ಕಾರ್ಯವನ್ನು ಆರಂಭಿಸಿದೆ.
ವಾಯುಸೇನೆಯ ಅಂಬಾಲ ವಾಯುನೆಲೆಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಸರ್ವಧರ್ಮಗಳ ಧಾರ್ಮಿಕ ವಿಧಿ ವಿಧಾನಗಳ ಮೂಲಕ ರಫೇಲ್ ಯುದ್ಧ ವಿಮಾನವನ್ನು ವಾಯುಪಡೆಯ ಭತ್ತಳಿಕಗೆ ಸೇರಿಸಲಾಗುತ್ತಿದೆ.
ಗೃಹಮಂತ್ರಿ ರಾಜನಾಥ್ ಸಿಂಗ್ ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದು, ಫ್ರಾನ್ಸ್ ನ ರಕ್ಷಣಾ ಸಚಿವೆ ಫ್ಲೋರೆನ್ಸ್ ಪಾರ್ಲೆ ಕೂಡಾ ಉಪಸ್ಥಿತರಿದ್ದಾರೆ.
ಭಾರತೀಯ ವಾಯುಸೇನೆಗೆ ಫ್ರಾನ್ಸ್ ನಿರ್ಮಿತ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲಾಗಿದ್ದು, ಇವುಗಳಲ್ಲಿ ಮೊದಲ ಹಂತದಲ್ಲಿ 5 ಯುದ್ಧ ವಿಮಾನಗಳು ಈಗಾಗಲೇ ಭಾರತಕ್ಕೆ ತಲುಪಿದ್ದು, ಇನ್ನುಳಿದ ವಿಮಾನಗಳು ಸದ್ಯದಲ್ಲೇ ಭಾರತೀಯ ವಾಯುಸೇನೆಯನ್ನು ಸೇರಲಿದೆ.
ಚೀನಾ ಭಾರತದ ಗಡಿಯಲ್ಲಿ ತನ್ನ ತಂಟೆಯನ್ನು ನಿರಂತರವಾಗಿ ಮುಂದುವರಿಸುತ್ತಿದ್ದು, ಚೀನಾದ ಆಕ್ರಮಣ ನೀತಿಗೆ ಉತ್ತರ ನೀಡುವ ನಿಟ್ಟಿನಲ್ಲಿ ಭಾರತ ಸೇನೆಯೂ ಸಜ್ಜಾಗುತ್ತಿದೆ.
ಈಗಾಗಲೇ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು ಲೇಹ್ ಹಾಗೂ ಲಡಾಕ್ ಭಾಗದಲ್ಲಿ ನಿಯೋಜನೆಗೊಂಡಿದ್ದು, ಭಾರತೀಯ ಸೇನೆಗೆ ಆನೆ ಬಲವಾಗಿ ಬಂದಿರುವ ರಫೇಲ್ ಕೂಡಾ ಮುಂದಿನ ದಿನಗಳಲ್ಲಿ ಭಾರತ-ಚೀನಾ ಗಡಿಯಲ್ಲಿ ನಿಯೋಜನೆಗೊಳ್ಳುವ ಸಾಧ್ಯತೆಯಿದೆ.