Connect with us

FILM

ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಧ್ಯಾಹ್ನ ಊಟ ಬಿಟ್ಟ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ

ಬೆಂಗಳೂರು:ಇಂದು ದೇಶದಾದ್ಯಂತ ರೈತರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇನ್ನೊಂದೆಡೆ ಕೇಂದ್ರ ಸರಕಾರದ ರೈತ ವಿರೋಧಿ ಕಾಯ್ದೆ ವಿರೋಧಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ ಅವರು ವಿಶೇಷವಾಗಿ ರೈತರನ್ನು ಬೆಂಬಲಿಸುವ ಮೂಲಕ ಅವರಿಗೆ ಶುಭಾಶಯ ತಿಳಿಸಿದ್ದಾರೆ


ಮೋಹಕ ತಾರೆ ರಮ್ಯಾ ಅವರು ಇಂದು ಮಧ್ಯಾಹ್ನದ ಊಟವನ್ನು ತ್ಯಜಿಸುವ ಮೂಲಕ ರೈತರಿಗೆ ತಮ್ಮ ಸಂಪೂರ್ಣ ಬೆಂಬಲ ನೀಡಿದ್ದಾರೆ. ಈ ಸಂಬಂಧ ಇನ್‍ಸ್ಟಾ ಸ್ಟೋರಿಯಲ್ಲಿ ಬರೆದುಕೊಂಡಿರುವ ದಿವ್ಯ ಸ್ಪಂದನ, ಕಿಸಾನ್ ದಿವಸವಾಗಿರುವ ಇಂದು ರೈತರಿಗೆ ಬೆಂಬಲ ಸೂಚಿಸುವ ಹಿನ್ನೆಲೆಯಲ್ಲಿ ನಾನು ಮಧ್ಯಾಹ್ನ ಊಟವನ್ನು ತ್ಯಜಿಸುತ್ತಿದ್ದೇನೆ.

ಕೇಂದ್ರದ ಕೃಷಿ ನೀತಿಯನ್ನು ವಿರೋಧಿಸಿ ರೈತರು ಆಗಸ್ಟ್ 9ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಮೋದಿ ಸರ್ಕಾರ ಮಾತ್ರ ನಿಶ್ಚಿಂತೆತೆಯಿಂದ ಇದ್ದು, ಕಾನೂನು ರದ್ದುಗೊಳಿಸಲು ನಿರಾಕರಿಸಿದೆ. ಮೋದಿ ಸರ್ಕಾರ ರೈತರ ಪರ ಇರುವ ಬದಲು ತಮ್ಮ ಕಾರ್ಪೋರೇಟ್ ಸ್ನೇಹಿತರನ್ನು ಮಾತ್ರ ಬೆಂಬಲಿಸುತ್ತಿದೆ ಎಂದು ಕಿಡಿಕಾರಿದ್ದಾರೆ.