Connect with us

FILM

ನನಗೆ ಮಕ್ಕಳು ಇಲ್ಲದೇ ಇರಬಹುದು, ಶ್ವಾನಗಳೇ ನನಗೆ ಮಕ್ಕಳ ಸಮಾನ: ರಮ್ಯಾ

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ವಿಕೆಂಡ್ ವಿಥ್ ರಮೇಶ್-5 ಶೋನಲ್ಲಿ ಭಾಗವಹಿಸಿದ ಮೇಲೆ ಹಲವು ವಿಚಾರಗಳು ಹೊರಬಿದ್ದಿದೆ. ಸಿನಿಮಾ, ರಾಜಕೀಯ, ಅವರ ಇಷ್ಟಗಳು ಹೀಗೆ ಸಾಕಷ್ಟು ವಿಚಾರಗಳನ್ನ ನಟಿ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಶ್ವಾನಗಳೆಂದರೆ ರಮ್ಯಾಗೆ ಎಲ್ಲಿಲ್ಲದ ಪ್ರೀತಿ. ನನನ್ನ ಮಕ್ಕಳಿಲ್ಲ ಆದರೆ ಶ್ವಾನಗಳೇ ನನ್ನ ಮಕ್ಕಳ ಸಮಾನ ಎಂದು ನಟಿ ಭಾವುಕರಾಗಿದ್ದಾರೆ.

ಯಶ್ ಜೊತೆ ಲಕ್ಕಿ ಎಂಬ ಸಿನಿಮಾದಲ್ಲಿ ರಮ್ಯಾ ಶ್ವಾನ ಪ್ರೇಮಿಯಾಗಿ ಕಾಣಿಸಿಕೊಂಡಿದ್ದರು. ರೀಲ್ ಮಾತ್ರವಲ್ಲ ರಿಯಲ್ ಲೈಫ್‌ನಲ್ಲೂ ಅವರಿಗೆ ಶ್ವಾನ ಅಂದರೆ ಅಚ್ಚುಮೆಚ್ಚು. ಶ್ವಾನ ತನ್ನ ಬದುಕಿನಲ್ಲಿ ಅದೆಷ್ಟು ಮುಖ್ಯ ಎಂಬುದನ್ನ ವಿಕೆಂಡ್ ವಿಥ್ ರಮೇಶ್ ಶೋನಲ್ಲಿ ಹಂಚಿಕೊಂಡಿದ್ದಾರೆ.

ನಟಿ ರಮ್ಯಾ, ನನಗೆ ಮಕ್ಕಳು ಇಲ್ಲದೇ ಇರಬಹುದು. ಆದರೆ, ಶ್ವಾನಗಳೇ ನನಗೆ ಮಕ್ಕಳ ಸಮಾನ. ಶ್ವಾನಗಳು ಅಂದ್ರೆ ನನಗೆ ತುಂಬಾ ಇಷ್ಟ. ನನ್ನ ಬಳಿ ಈಗ ಎರಡು ಶ್ವಾನಗಳಿವೆ. ಒಂದರ ಹೆಸರು ಚಾಂಪ್. ಅವನಿಗೀಗ 16 ವರ್ಷ ವಯಸ್ಸು. ಅವನಿಗೆ ಹೃದಯ ಸಂಬಂಧಿ ಸಮಸ್ಯೆ ಇದೆ. ಇನ್ನೊಂದು ಹೆಸರು ರಾಣಿ. ಗೋವಾದಲ್ಲಿ ರಾಣಿ ಮೇಲೆ ಯಾರೋ ಗಾಡಿ ಹತ್ತಿಸಿದ್ದರು. ಅವಳನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದೆ. ಒಂದು ತಿಂಗಳ ಬಳಿಕ ರಾಣಿ ನನ್ನ ಬಳಿಯೇ ಬಂದಳು. ಅವಳಿಗೆ ನಾನು ರಾಣಿ ಅಂತ ಹೆಸರಿಟ್ಟಿದ್ದೇನೆ. ಐ ಲವ್ ರಾಣಿ. ಅವಳು ನನ್ನ ಜೀವನವನ್ನೇ ಬದಲಾಯಿಸಿದ್ದಾಳೆ ಎಂದರು.

ಶ್ವಾನ ಬ್ರ‍್ಯಾಂಡಿ ಫೋಟೋವನ್ನು ರಮ್ಯಾಗೆ ಉಡುಗೊರೆಯಾಗಿ ನೀಡಲಾಯಿತು. ಅದನ್ನ ನೋಡಿದ ರಮ್ಯಾ, ಬ್ರ‍್ಯಾಂಡಿ ನನಗೆ ತುಂಬಾ ಸ್ಪೆಷಲ್. ಒಂದು ವರ್ಷ ಆಯ್ತು ಅವಳು ತೀರಿಕೊಂಡು. ಕಳೆದ ವರ್ಷದ ಮಾರ್ಚ್ 14ರಂದು ಅವಳು ತೀರಿಕೊಂಡಳು. ಅಂಬರೀಶ್ ಅವರು ನನಗೆ ಬ್ರ‍್ಯಾಂಡಿಯನ್ನ ಕೊಟ್ಟಿದ್ದು ಎಂದು ಸ್ಮರಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *