Connect with us

    LATEST NEWS

    ಅಡ್ಯಾರ್ – ಐಸ್ ಕ್ರೀಂ ಗೋಡೌನ್ ಗೆ ಬೆಂಕಿ….!!

    ಮಂಗಳೂರು ಮಾರ್ಚ್ 28: ಐಸ್ ಕ್ರೀಂ ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಕೋಟ್ಯಾಂತರ ರೂಪಾಯಿ ನಷ್ಟವಾದ ಘಟನೆ ಅಡ್ಯಾರ್ ನಲ್ಲಿರುವ ಪೋಲಾರ್ ಐಸ್ ಕ್ರೀಂ‌ ಸೂಪರ್ ಸ್ಟಾಕಿಸ್ಟ್ ನಲ್ಲಿ ನಡೆದಿದೆ. ನಂದಿನಿ ಐಸ್ ಕ್ರೀಂ ದಾಸ್ತಾನು ಇಡಲಾಗಿದ್ದ ಈ ಗೋದಾಮಿಗೆ ಮುಂಜಾನೆ ಎರಡು ಗಂಟೆಯ ಸುಮಾರಿಗೆ ಬೆಂಕಿ ತಗಲಿ ಕೋಟ್ಯಂತರ ರೂ. ನಷ್ಟ ಸಂಭವಿಸಿದೆ.


    ಘಟನೆಯ ಪರಿಣಾಮ ವಾಹನ ಸೇರಿದಂತೆ ಸುಮಾರು 5 ಕೋ.ರೂ ಮೌಲ್ಯದ ಸೊತ್ತುಗಳು ಬೆಂಕಿಗೆ ಆಹುತಿಯಾಗಿವೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗಲಿದೆ ಎನ್ನಲಾಗಿದ್ದು, ಮೂರು ಅಗ್ನಿಶಾಮಕ ವಾಹನಗಳು ಸುಮಾರು ನಾಲ್ಕು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಿಯಂತ್ರಿಸಿವೆ. ಕಾರವಾರದಿಂದ ಕಾಸರಗೋಡಿನವರೆಗೆ ನಂದಿನಿ ಐಸ್ ಕ್ರ್ರೀಂ ವಿತರಿಸುವ ಕೇಂದ್ರ ಇದಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply