FILM
ಕಿಚ್ಚ ಸುದೀಪ್ ನಿರ್ಧಾರ ನನಗೆ ಶಾಕ್ ನೀಡಿದೆ – ಪ್ರಕಾಶ್ ರೈ

ಬೆಂಗಳೂರು ಎಪ್ರಿಲ್ 5: ಖ್ಯಾತ ಕಿಚ್ಚ ಸುದೀಪ್ ಸಿಎಂ ಪರವಾಗಿ ನಾನು ಪ್ರಚಾರ ಮಾಡುತ್ತೇನೆ ಎಂಬ ಹೇಳಿಕೆಗೆ ನಟ ಪ್ರಕಾಶ್ ರೈ ಪ್ರತಿಕ್ರಿಯೆ ನೀಡಿದ್ದು, ಕಿಚ್ಚ ಸುದೀಪ್ ನಿರ್ಧಾರ ನನಗೆ ಶಾಕ್ ನೀಡಿದೆ ಎಂದಿದ್ದಾರೆ. ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಕಿಚ್ಚ ಸುದೀಪ್ ಅಧಿಕೃತವಾಗಿ ಬಿಜೆಪಿಗೆ ಸೇರದೆ ಪ್ರಚಾರ ಮಾತ್ರ ಮಾಡುತ್ತೇನೆ ಎಂದು ಘೋಷಣೆ ಮಾಡಿದ್ರು.
ಸುದೀಪ್ ಬಿಜೆಪಿ ಪಕ್ಷ ಸೇರ್ತಾರೆ ಅನ್ನೋ ಸುದ್ದಿ ವೈರಲ್ ಆಗುತ್ತಿದ್ದಂತೆ ಬಹುಭಾಷಾ ನಟ ಪ್ರಕಾಶ್ ರಾಜ್ ಪ್ರತಿಕ್ರಿಯೆ ಕೊಟ್ಟಿದ್ದರು. ‘ಕರ್ನಾಟಕದಲ್ಲಿ ಸೋಲುವ ಭಯದಲ್ಲಿ ಭ್ರಷ್ಟ BJP ಹರಡುತ್ತಿರುವ ಸುಳ್ಳುಸುದ್ದಿ ಎಂದು ನಾನು ನಂಬುತ್ತೇನೆ. ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ’ ಎಂದು ಟ್ವೀಟ್ ಮಾಡಿದ್ದರು.

ಈಗ ಮತ್ತೆ ಸುದೀಪ್ ಬಿಜೆಪಿಗೆ ಬೆಂಬಲ ನೀಡಿದ ವಿಷಯವಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ ನಟ ಪ್ರಕಾಶ್ ರಾಜ್. ಸುದೀಪ್ ಈ ನಿರ್ಧಾರದಿಂದ ನನಗೆ ಶಾಕ್ ಆಗಿದೆ. ಇದು ನನಗೆ ನೋವು ತಂದಿದೆ ಎಂದು ಪ್ರಕಾಶ್ ರಾಜ್ ಅಸಮಾಧಾನ ಹೊರಹಾಕಿದ್ದಾರೆ.