KARNATAKA
ಮೋದಿ ಅವಕಾಶ ಕೊಟ್ರೆ ಪಾಕ್ ವಿರುದ್ಧ ಯುದ್ದಕ್ಕೆ ಹೋಗಲು ರೆಡಿ: ಜಮೀರ್ ಅಹಮದ್ ಖಾನ್

ಹೊಸಪೇಟೆ ಮೇ 03: ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನನಗೆ ಅವಕಾಶ ನೀಡಿದರೆ, ಪಾಕಿಸ್ತಾನದ ವಿರುದ್ಧ ಯುದ್ಧ ಮಾಡುವುದಕ್ಕೆ ನಾನೇ ಹೋಗುವೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ನಾವು ಭಾರತೀಯರು, ನಾವು ಹಿಂದೂಸ್ಥಾನಿಯರು. ನಮಗೂ ಹಾಗೂ ಪಾಕಿಸ್ತಾನಕ್ಕೂ ಯಾವ ಸಂಬಂಧವೂ ಇಲ್ಲ. ಯುದ್ಧ ಮಾಡಲು ನಾನು ಸಿದ್ದ. ಮಂತ್ರಿಯಾಗಿರುವ ನನ್ನನ್ನು ಯುದ್ಧಕ್ಕೆ ಕಳುಹಿಸುತ್ತಾರೆ ಎಂದರೆ, ಹೋಗಲು ನಾನು ಸಿದ್ದ. ನಾನೇ ಹೋಗುತ್ತೇನೆ ಯುದ್ಧ ಮಾಡುವುದಕ್ಕೆ. ನಡೀರಿ ಎಲ್ಲ ಹೋಗೋಣ’ ಎಂದು ಅಲ್ಲಿದ್ದ ಎಲ್ಲರಿಗೂ ಹೇಳಿದರು.
ಮಾತು ಮುಂದುವರಿಸಿದ ಜಮೀರ್, ‘ಸೂಸೈಡ್ ಬ್ಯಾಗ್ ಹಾಕಲು ನಾನು ಸಿದ್ದ. ನಾನು ತಮಾಷೆಗೆ, ಸುಮ್ಮನೆ ಜೋಶ್ ನಲ್ಲಿ ಹೇಳುತ್ತಿಲ್ಲ. ಈ ದೇಶಕ್ಕೋಸ್ಕರ, ನನ್ನ ಅಗತ್ಯ ಇದ್ದರೆ ಸೂಸೈಡ್ ಬ್ಯಾಗ್ ಅನ್ನು ಅಮಿತ್ ಶಾ, ನರೇಂದ್ರ ಮೋದಿ ಅವರು ನನಗೆ ಕೊಡಲಿ. ದೇವರ ಮೇಲಾಣೆ ನಾನು ಪಾಕಿಸ್ತಾನಕ್ಕೆ ಹೋಗು ತ್ತೇನೆ’ ಎಂದು ಹೇಳಿದರು.
