LATEST NEWS
ಪ್ರಿಯಕರ ಸಲ್ಮಾನ್ ಆತ್ಮಹತ್ಯೆ ಮಾಡಿದ ಆಘಾತದಿಂದ ನೇಣಿಗೆ ಕೊರಳೊಡ್ಡಿದ ಪ್ರಿಯತಮೆ ನೇಹಾ.!

ಪ್ರಿಯಕರನ ಸಾವಿನಿಂದ ನೊಂದಿದ್ದ ಪ್ರಿಯತಮೆ ನೇಣಿಗೆ ಶರಣಾಗಿ ಪ್ರಾಣ ಕಳೆದುಕೊಂಡ ದಾರುಣ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಹೈದರಾಬಾದ್: ಪ್ರಿಯಕರನ ಸಾವಿನಿಂದ ನೊಂದಿದ್ದ ಪ್ರಿಯತಮೆ ನೇಣಿಗೆ ಶರಣಾಗಿ ಪ್ರಾಣ ಕಳೆದುಕೊಂಡ ದಾರುಣ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಪಂಜಾಬ್ ಮೂಲದ ನೇಹಾ (19) ಮೃತ ಯುವತಿಯಾಗಿದ್ದಾಳೆ.
ನೇಹಾ ಪಂಜಾಬ್ ಮೂಲದವರಾಗಿದ್ದು, ಹೈದರಾಬಾದ್ ನಲ್ಲಿ ಹಾಸ್ಟೆಲ್‌ನಲ್ಲಿ ವಾಸವಿದ್ದಳು.
ಕಳೆದ 8 ತಿಂಗಳಿನಿಂದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಈ ನಡುವೆ ಅದೇ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಸಲ್ಮಾನ್ ಎನ್ನುವ ಯುವಕನೊಬ್ಬನ ಜೊತೆ ನೇಹಾಳಿಗೆ ಪ್ರೀತಿ ಆಗಿದೆ.
ಆದರೆ ಇಬ್ಬರ ನಡುವಿನ ಪ್ರೀತಿಯ ವಿಚಾರ ಅಂಗಡಿಯ ಮಾಲೀಕರಿಗೆ ಗೊತ್ತಾಗಿ ಸಲ್ಮಾನ್ ನನ್ನು ಕೆಲಸದಿಂದ ತೆಗೆದು ಹಾಕಿದ್ದಾನೆ.
ಜೊತೆಗೆ ಸಲ್ಮಾನ್ ಮನೆಯವರಿಗೆ ನೇಹಾಳೊಂದಿಗಿನ ಪ್ರೀತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಇದರಿಂದ ಮನನೊಂದಿದ್ದ ಸಲ್ಮಾನ್ ಅಕ್ಟೋಬರ್ 1 ರಂದು ಆತ್ಮಹತ್ಯೆ ಮಾಡಿಕೊಂಡಿದ್ದ.
ಪ್ರಿಯಕರ ಸಲ್ಮಾನ್ ಆತ್ಮಹತ್ಯೆ ಮಾಡಿಕೊಂಡ ವಿಚಾರದಿಂದ ಹತಾಶಳಾದ ನೇಹಾ ಮಂಗಳವಾರದಂದು ಹಾಸ್ಟೆಲ್ ನ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಸ್ವಚ್ಛತಾ ಸಿಬ್ಬಂದಿ ಕೊಠಡಿ ಸ್ವಚ್ಛಗೊಳಿಸಲು ಬಂದಾಗ ಬಾಗಿಲು ತಟ್ಟಿದರೂ ನೇಹಾ ಸ್ಪಂದಿಸಲಿಲ್ಲ.
ಹಾಸ್ಟೆಲ್ ಸಿಬ್ಬಂದಿ ಅನುಮಾನಗೊಂಡು ಕಿಟಕಿಯಿಂದ ನೋಡಿದಾಗ ನೇಹಾ ಕೋಣೆಯೊಳಗಿನ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ.
ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಹಾಸ್ಟೆಲ್‌ಗೆ ಆಗಮಿಸಿ ಬಾಗಿಲು ಒಡೆದು ನೋಡಿದಾಗ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಈ ಸಂಬಂಧ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.ಪ್ರಿಯಕರನ ಆತ್ಮಹತ್ಯೆಯ ಸುದ್ದಿಯನ್ನು ಸಹಿಸಲಾಗದೆ ಆಕೆ ತನ್ನ ಜೀವನವನ್ನು ಅಂತ್ಯಗೊಳಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.