Connect with us

LATEST NEWS

ತಮ್ಮ ಮಕ್ಕಳ ಕಾಲೇಜ್ ಫೀಸ್ ಕಟ್ಟಲು ಹಣಕ್ಕಾಗಿ ತಮ್ಮದೇ ಅಶ್ಲೀಲ ವಿಡಿಯೋ ನೇರ ಪ್ರಸಾರ ಮಾಡುತ್ತಿದ್ದ ದಂಪತಿ ಅರೆಸ್ಟ್

ಹೈದರಾಬಾದ್ ಜೂನ್ 27: ತಮ್ಮ ಇಬ್ಬರು ಹೆಣ್ಣು ಮಕ್ಕಳ ಕಾಲೇಜ್ ಶುಲ್ಕ ಭರಿಸಲು ಹಣಕ್ಕಾಗಿ ತಮ್ಮದೇ ಲೈಂಗಿಕ ಕ್ರಿಯೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೇರ ಪ್ರಸಾರ ಹಾಗೂ ಮಾರಾಟ ಮಾಡಿರುವುದಾಗಿ ಬಂಧಿತ ದಂಪತಿ ಪೊಲೀಸರ ಮುಂದೆ ತಿಳಿಸಿದ್ದಾರೆ.


ಗುರುವಾರ ಅಂಬರ್‌ಪೇಟೆಯ ಮಲ್ಲಿಕಾರ್ಜುನ ನಗರದಿಂದ ಲೈಂಗಿಕ ಕ್ರಿಯೆಯ ವಿಡಿಯೋಗಳನ್ನು ಮಾಡುತ್ತಿದ್ದ ದಂಪತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಬಂಧಿತರಿಂದ ಕ್ಯಾಮರಾ ಸೇರಿದಂತೆ ಹಲವಾರು ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬಂಧಿತ ದಂಪತಿ ತಮ್ಮ ಲೈಂಗಿಕ ಕ್ರಿಯೆಗಳ ಲೈವ್ ಮತ್ತು ರೆಕಾರ್ಡ್ ಮಾಡಿದ ವೀಡಿಯೊಗಳನ್ನು ಆ್ಯಪ್ ಬಳಕೆದಾರರೊಂದಿಗೆ ಹಂಚಿಕೊಳ್ಳುತ್ತಿದ್ದರು. ಲೈವ್ ವೀಡಿಯೊಗೆ 2,000 ರೂ. ಬೆಲೆಯಿದ್ದರೆ, ರೆಕಾರ್ಡ್ ಮಾಡಿದ ಕ್ಲಿಪ್ ಅನ್ನು 500 ರೂ.ಗೆ ಮಾರಾಟ ಮಾಡಲಾಗುತ್ತಿತ್ತು.

ಬಂಧಿತರ ವಿಚಾರಣೆ ನಡೆಸಿದಾಗ ದಂಪತಿ ತಮ್ಮ ಹೆಣ್ಣುಮಕ್ಕಳ ಕಾಲೇಜು ಶುಲ್ಕ ಕಟ್ಟಲು ನಾವು ಈ ದಂಧೆ ಮಾಡುತ್ತಿದ್ದೇವು ಎಂದು ಹೇಳಿದ್ದಾರೆ. ದಂಪತಿಯ ಓರ್ವ ಮಗಳು ಎರಡನೇ ವರ್ಷದ ಬಿ.ಟೆಕ್ ವಿದ್ಯಾರ್ಥಿನಿಯಾಗಿದ್ದರೆ, ಇನ್ನೊಬ್ಬರು ಇತ್ತೀಚೆಗೆ ತನ್ನ ಪಿಯುಸಿ ಪರೀಕ್ಷೆಯಲ್ಲಿ 470 ರಲ್ಲಿ 468 ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರವೇಶಿಸಲು ತಯಾರಿ ನಡೆಸುತ್ತಿದ್ದರು. ಇದಲ್ಲದೆ, ಆಟೋ ಚಾಲಕನಾಗಿರುವ ಗಂಡ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ವೈದ್ಯಕೀಯ ವೆಚ್ಚವನ್ನು ಭರಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಹೀಗಾಗಿ ದಂಪತಿಗಳಿಗೆ ಹಣಕಾಸಿನ ಅವಶ್ಯಕತೆಯಿತ್ತು ಮತ್ತು ಸುಲಭವಾಗಿ ಹಣ ಗಳಿಸುವ ಸಲುವಾಗಿ ಇಂತಹ ಕೃತ್ಯಗಳನ್ನು ನಡೆಸುತ್ತಿದ್ದರು ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ದಂಪತಿಗಳ ಮೇಲೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಂಪತಿಗಳಿಂದ ವೀಡಿಯೊಗಳನ್ನು ಖರೀದಿಸಿದವರಿಗೂ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *