UDUPI
ಕುಡಿದ ಮತ್ತಿನಲ್ಲಿ ಕತ್ತಿಯಿಂದ ಪತ್ನಿಯ ತಲೆ ಕಡಿದ ಪತಿ

ಕುಡಿದ ಮತ್ತಿನಲ್ಲಿ ಕತ್ತಿಯಿಂದ ಪತ್ನಿಯ ತಲೆ ಕಡಿದ ಪತಿ
ಉಡುಪಿ ಜುಲೈ 24: ಕುಡಿದ ಮತ್ತಿನಲ್ಲಿ ಹೆಂಡತಿಯನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬ್ರಹ್ಮಾವರ ಸಮೀಪದ ಹೇರೂರಿನಲ್ಲಿ ನಡೆದಿದೆ.
ಆರೋಪಿ ರಾಜು ಪೂಜಾರಿ ತನ್ನ ಎರಡನೇ ಹೆಂಡತಿ ಗಿರಿಜಾ ಅವರನ್ನು ಸಂಜೆ ಕುಡಿದ ಮತ್ತಿನಲ್ಲಿ ಕಡಿದು ಕೊಲೆ ಮಾಡಿದ್ದಾನೆ. ಕೌಟುಂಬಿಕ ಕಲಹ ವಿಪರೀತವಾಗಿ ಮನೆಯಲ್ಲಿದ್ದ ಕತ್ತಿಯಿಂದ ತಲೆಗೆ ಮತ್ತು ದೇಹದ ಇತರೆ ಭಾಗಗಳಿಗೆ ಕಡಿದಿದ್ದಾನೆ. ಮೃತ ದೇಹವನ್ನು ಹತ್ತಿರದ ತೋಡಿಗೆ ಹಾಕಲು ಎಳೆದುಕೊಂಡು ಹೋಗಿದ್ದಾನೆ.

ಇದನ್ನು ಕಂಡ ಅಳಿಯ ಆರೋಪಿಯನ್ನು ಊರಿನವರ ಸಹಾಯದಿಂದ ಹಿಡಿದು ಬ್ರಹ್ಮಾವರ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಬ್ರಹ್ಮಾವರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Continue Reading