Connect with us

LATEST NEWS

ಪತ್ನಿಯ ಅತಿಯಾದ ಖರ್ಚಿನಿಂದ ಬೇಸತ್ತ ಪತಿ: ಪತ್ನಿಯ ಹತ್ಯೆಗೆ ಸುಪಾರಿ ಕೊಟ್ಟ

ಗ್ವಾ ಲಿಯರ್:‌ ಪತ್ನಿಯ ಅತಿಯಾದ ಖರ್ಚಿನಿಂದ ಬೇಸತ್ತ ವ್ಯಕ್ತಿಯೊಬ್ಬ ಸುಪಾರಿ ನೀಡಿ ಆಕೆಯನ್ನ ಹತ್ಯೆ ಮಾಡಿಸಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ ನಲ್ಲಿ ಇತ್ತೀಚೆಗೆ ನಡೆದಿದೆ.

ಹೇಮಂತ್‌ ಶರ್ಮಾ ಎಂಬಾತನೇ ಕೊಲೆ ಆರೋಪಿ ಪತಿ. ದುಂದು ವೆಚ್ಚ ಮಾಡುತ್ತಿದ್ದ ಪತ್ನಿಯ ಕೊಲೆಗೆ ಸ್ನೇಹಿತರಿಗೆ 2.5 ಲಕ್ಷ ರೂ ನೀಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ರಸ್ತೆ ಅಪಘಾತದಂತೆ ಬಿಂಬಿಸಿ ಹತ್ಯೆ ಮಾಡಲಾಗಿದೆ. ಈ ಘಟನೆ ಆಗಸ್ಟ್‌ 13ರಂದು ನಡೆದಿದ್ದು, ಹತ್ತು ದಿನಗಳ ಬಳಿಕ ಅಸಲೀಯತ್ತು ಹೊರಬಿದ್ದಿದೆ.

ಪೊಲೀಸರ ಪ್ರಕಾರ, ಶರ್ಮಾ ಅವರು ರಸ್ತೆ ಅಪಘಾತದಂತೆ ಕಾಣುವಂತೆ ಕೊಲೆ ಮಾಡಿದ್ದಾರೆ. ಘಟನೆ ದಿನದಂದು ಶರ್ಮಾ ತನ್ನ ಪತ್ನಿ ದುರ್ಗಾವತಿ ಮತ್ತು ಆಕೆಯ ಸಹೋದರ ಸಂದೇಶ್ ಅವರನ್ನು ದೇವಸ್ಥಾನಕ್ಕೆ ಕರೆದೊಯ್ದರು. ವಾಪಸಾಗುತ್ತಿದ್ದಾಗ ಶರ್ಮಾ ಅವರ ಸಹಚರರೊಬ್ಬರು ಚಲಾಯಿಸುತ್ತಿದ್ದ ಇಕೋಸ್ಪೋರ್ಟ್ ಕಾರು ದುರ್ಗಾವತಿ ಮತ್ತು ಸಂದೇಶ್ ಪ್ರಯಾಣಿಸುತ್ತಿದ್ದ ಮೋಟಾರ್ ಬೈಕ್‌ ಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದೆ.

ಘಟನೆಯ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ದುರ್ಗಾವತಿ ಅವರು ಬಳಿಕ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಸಂದೇಶ್‌ ಅವರು ಬಳಿಕ ಚೇತರಿಸಿಕೊಂಡಿದ್ದಾರೆ.

ಆರಂಭದಲ್ಲಿ ಇದು ಒಂದು ಹಿಟ್‌ ಆಂಡ್‌ ರನ್‌ ಕೇಸು ಎಂದು ಹೇಮಂತ್‌ ಶರ್ಮಾ ಕೇಸು ದಾಖಲಿಸಿದ್ದರು. ಲೋಡಿಂಗ್‌ ವಾಹನವೊಂದು ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದರು.

ಆದರೆ, ಅವರ ಹೇಳಿಕೆಯಲ್ಲಿನ ವ್ಯತ್ಯಾಸಗಳು ಮತ್ತು ಆ ಪ್ರದೇಶದ ಸಿಸಿಟಿವಿ ದೃಶ್ಯಗಳಲ್ಲಿ ಅಂತಹ ವಾಹನದ ಪುರಾವೆ ಇಲ್ಲದಿರುವುದು ಪೊಲೀಸರಿಗೆ ಅನುಮಾನಗಳನ್ನು ಹುಟ್ಟುಹಾಕಿದೆ. ಹೆಚ್ಚಿನ ತನಿಖೆಯ ವೇಳೆ ಅಪಘಾತಕ್ಕೆ ಸ್ವಲ್ಪ ಮೊದಲು ಬೈಕ್‌ ಹಿಂದೆ ಇಕೋಸ್ಪೋರ್ಟ್ ಕಾರು ಇರುವುದು ಕಂಡು ಬಂದಿತ್ತು. ಶರ್ಮಾ ಅವರ ವೈಯಕ್ತಿಕ ಜೀವನವನ್ನು ಮತ್ತಷ್ಟು ತನಿಖೆ ಮಾಡಲು ಇದು ಪೊಲೀಸರನ್ನು ಪ್ರೇರೇಪಿಸಿತು.

ಹೇಮಂತ್ ಶರ್ಮಾ ಅವರ ಎರಡನೇ ಪತ್ನಿಯಾಗಿದ್ದ ದುರ್ಗಾವತಿ ಅವರು 2021 ರಲ್ಲಿ ಮೊದಲ ಮದುವೆಗೆ ಮೊದಲು ಅವರೊಂದಿಗೆ ಪ್ರೀತಿ ಸಂಬಂಧ ಹೊಂದಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಶರ್ಮಾ ಕೂಡ 2022 ರಲ್ಲಿ ಅನ್ಯ ಯುವತಿಯ ಜೊತೆ ವಿವಾಹವಾಗಿದ್ದರು.

ಆದರೆ, ಶರ್ಮಾ ಮದುವೆಯಾದ ಕೆಲವೇ ದಿನಗಳಲ್ಲಿ ದುರ್ಗಾವತಿ ತನ್ನ ಮೊದಲ ಪತಿಗೆ ವಿಚ್ಛೇದನ ನೀಡಿ ಮನೆಗೆ ಮರಳಿದಳು. ನಂತರ, ದುರ್ಗಾವತಿ ಶರ್ಮಾಳೊಂದಿಗೆ ಮತ್ತೆ ಒಂದಾದರು ಮತ್ತು ಇಬ್ಬರೂ 2023 ರಲ್ಲಿ ನ್ಯಾಯಾಲಯದಲ್ಲಿ ವಿವಾಹವಾದರು.

ಆದರೆ ದುರ್ಗಾವತಿಯ ದುಂದುವೆಚ್ಚದ ಕಾರಣದಿಂದ ಈ ವಿವಾಹದಲ್ಲೂ ಬಿರಕು ಕಂಡುಬಂದಿದೆ. ಆಕೆಯ ಅತಿ ವೆಚ್ಚದ ಕಾರಣದಿಂದ ಶರ್ಮಾಗೆ ಹಣಕಾಸಿನ ತೊಂದರೆ ಉಂಟಾಗುತ್ತಿತ್ತು. ಇದರಿಂದ ರೋಸಿಹೋದ ಶರ್ಮಾ ಪತ್ನಿಯ ಕೊಲೆಗೆ ಯೋಜನೆ ರೂಪಿಸಿದ್ದ. ಪೊಲೀಸರು ಹೇಮಂತ್‌ ಶರ್ಮಾ, ಕಾರು ಡ್ರೈವರ್‌ ಮತ್ತು ಸಹಾಯ ಮಾಡಿದ್ದ ಇಬ್ಬರನ್ನು ಬಂಧಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *