KARNATAKA
ಮದುವೆಯಾದ ಮೂರು ತಿಂಗಳಿಗೆ ಪತ್ನಿ ಕಿರುಕುಳಕ್ಕೆ ಪತಿ ಆತ್ಮಹ*ತ್ಯೆ

ಕಲಬುರಗಿ: ಪತ್ನಿ ಕಿರುಕುಳ ತಾಳದೆ ಮದುವೆಯಾದ ಮೂರು ತಿಂಗಳಲ್ಲೇ ಪತಿ ನೇಣು ಹಾಕಿಕೊಂಡು ಆತ್ಮಹ*ತ್ಯೆ ಮಾಡಿಕೊಂಡ ಘಟನೆ ನಗರದ ಶಹಾ ಬಜಾರ್ ಬಡಾವಣೆಯ ಮಹಾದೇವ ನಗರದಲ್ಲಿ ಸೋಮವಾರ ಸಂಭವಿಸಿದೆ.

ಮಹಾದೇವ ನಗರದ ರಾಕೇಶ ಹಣಮಂತರಾಯ ಬಿರಾದಾರ (30) ಆತ್ಮಹ*ತ್ಯೆ ಮಾಡಿಕೊಂಡ ಯುವಕ. ರಾಕೇಶನ ಪತ್ನಿ ಮೇಘಾ, ಮೇಘಾಳ ತಾಯಿ ರೇಣುಕಾ ಮತ್ತು ಮೇಘಾಳ ಅಕ್ಕ ಪ್ರಿಯಾಂಕ್ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಮೂಲತಃ ಆಳಂದ ತಾಲೂಕಿನ ವೈಜಾಪುರದವನಾದ ರಾಕೇಶ ವಿವಾಹ ಕಳೆದ ನ 17ರಂದು ಜೀವರ್ಗಿ ತಾಲೂಕಿನ ಕುಳಗೇರಿಯ ರೇಣುಕಾ ನಗನೂರ ಪುತ್ರಿ ಮೇಘಾಳ ಜತೆ ಅದ್ದೂರಿಯಾಗಿ ನಡೆದಿತ್ತು ರಾಕೇಶ ನಗರದ ಖಾಸಗಿ ಆಸ್ಪತ್ರೆಯ ಮೆಡಿಕಲ್ ಸ್ಟೋರ್ ನಲ್ಲಿ ಕೆಲಸ ಮಾಡುತ್ತಿದ್ದ

ಮೇಘಾ ಹೆಚ್ಚಿನ ಹಣ ತರುವಂತೆ ಪತಿಗೆ ಪೀಡಿಸುತ್ತಿದ್ದಳು ಅಲ್ಲದೇ ರಾಕೇಶನ ತಂದೆ-ತಾಯಿಗೆ ಅಡುಗೆ ಮಾಡಿ ಹಾಕುವುದಿಲ್ಲ ಎಂದು ಜಗಳವಾಡುತ್ತಿದ್ದಳು ಎನ್ನಲಾಗಿದೆ ಇದಲ್ಲದೇ ಮೇಘಾಳ ತಾಯಿ ರೇಣುಕಾ ಹಾಗೂ ಮೇಘಾಳ ಅಕ್ಕ ಪ್ರಿಯಾಂಕ್ ರಾಕೇಶಗೆ ಜೀವ ಬೆದರಿಕೆ ಕೂಡ ಹಾಕಿದ್ದರು ಇದರಿಂದ ಮನನೊಂದು ಆತ್ಮಹ*ತ್ಯೆಗೆ ಶರಣಾಗಿದ್ದಾನೆ ಎಂದು ರಾಕೇಶನ ತಾಯಿ ಅನಿತಾ ಬಿರಾದಾರ ದೂರು ನೀಡಿದ್ದಾರೆ. ಮಗನ ಸಾವಿಗೆ ಸೊಸೆ ಹಾಗೂ ಸೊಸೆಯ ತಾಯಿ ರೇಣುಕಾ ಮತ್ತು ಅವಳ ಅಕ್ಕ ಪ್ರಿಯಾಂಕ್ ಕಿರುಕುಳವೇ ಕಾರಣ ಎಂದು ದೂರಿನಲ್ಲಿ ಉಲ್ಲೇಖೀಸಿದ್ದಾರೆ. ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.