LATEST NEWS
ಸಂಸತ್ ಕಲಾಪಕ್ಕೆ ಎಳ್ಳು ನೀರು ಬಿಟ್ಟ ಕಾಂಗ್ರೆಸಿನ ಧೋರಣೆ ಖಂಡಿಸಿ ಸಂಸದ ಕಟೀಲ್ ನೇತ್ರತ್ವದಲ್ಲಿ ಉಪವಾಸ

ಸಂಸತ್ ಕಲಾಪಕ್ಕೆ ಎಳ್ಳು ನೀರು ಬಿಟ್ಟ ಕಾಂಗ್ರೆಸಿನ ಧೋರಣೆ ಖಂಡಿಸಿ ಸಂಸದ ಕಟೀಲ್ ನೇತ್ರತ್ವದಲ್ಲಿ ಉಪವಾಸ
ಮಂಗಳೂರು, ಎಪ್ರಿಲ್ 12 : ಸಂಸತ್ ಕಲಾಪ ನಡೆಯಲು ಬಿಡದ ವಿಪಕ್ಷಗಳ ವರ್ತನೆ ಖಂಡಿಸಿ ಕೇಂದ್ರ ಸರ್ಕಾರದ ಉಪವಾಸ ಸತ್ಯಾಗ್ರಹ ಕ್ಕೆ ರಾಜ್ಯದ ಬಿಜೆಪಿ ಸಂಸದರು ಬೆಂಬಲ ಸೂಚಿಸಿದ್ದಾರೆ.
ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಗಾಂಧೀ ಪ್ರತಿಮೆ ಮುಂಭಾಗ ಸಂಸದ ನಳಿನ್ ಕುಮಾರ್ ಕಟೀಲ್ ಉಪವಾಸ ಸತ್ಯಾಗ್ರಹ ನಡೆಸಿದರು.

ನಳಿನ್ ಕುಮಾರ್ ಗೆ ದಕ್ಷಿಣ ಕನ್ನಡ ಬಿಜೆಪಿ ಮುಖಂಡರೂ ಬೆಂಬಲ ನೀಡಿದ್ದು ಕಾಂಗ್ರೆಸ್ ಧೋರಣೆ ವಿರುದ್ದ ಖಂಡನೆ ವ್ಯಕ್ತಪಡಿಸಿದ್ದರು.
ಪ್ರತಿಭಟನಾ ವೇಳೆ ಮಾತನಾಡಿದ ನಳಿನ್ ಕುಮಾರ್, ಪ್ರಧಾನಿ ಮೋದಿಯ ಕರೆಯಂತೆ ಒಂದು ತಿಂಗಳ ಸಂಬಳ ಮತ್ತುಭತ್ಯೆಯನ್ನು ತ್ಯಜಿಸಿದ್ದೇವೆ.
ಕಾಂಗ್ರೆಸ್ ನವರು ತಾಕತ್ ಇದ್ದರೆ ಸಂಬಳಬಿಟ್ಟು ಕೊಡಲಿ, ದೇಶದ ತೆರಿಗೆಯ ಹಣ ಪೋಲಾಗಲು ಬಿಡೋದಿಲ್ಲ ಅಂತಾ ಹೇಳಿದರು.
ಮಾಜಿ ಉಪ ಸಭಾಪತಿ ಎನ್. ಯೋಗಿಶ್ ಭಟ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಪಾಲಿಕೆ ಸದಸ್ಯರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ.