LATEST NEWS
ಗೃಹ ಬಂಧನದಿಂದ ಮುಕ್ತಿಗೊಳಿಸಿ ಹಿರಿಯ ಜೀವಕ್ಕೆ ಆಶ್ರಯ ನೀಡಿದ ಉಪ್ಪಿನಂಗಡಿ ಎಸ್ ಐ
ಗೃಹ ಬಂಧನದಿಂದ ಮುಕ್ತಿಗೊಳಿಸಿ ಹಿರಿಯ ಜೀವಕ್ಕೆ ಆಶ್ರಯ ನೀಡಿದ ಉಪ್ಪಿನಂಗಡಿ ಎಸ್ ಐ
ಪುತ್ತೂರು ಅಕ್ಟೋಬರ್ 1: ಸೊಸೆಯ ಗೃಹ ಬಂಧನದಿಂದ ಮನೆ ಮಂದಿಗೆ ಬೇಡವಾದ ಹಿರಿಯ ಜೀವವನ್ನು ಉಪ್ಪಿನಂಗಡಿ ಸಬ್ ಇನ್ಸಪೆಕ್ಟರ್ ನಂದ್ ಕುಮಾರ್ ತನ್ನ ಸ್ವಂತ ಮನೆಯಲ್ಲಿ ಆಶ್ರಯ ನೀಡಿ ಮಾನವೀಯತೆ ಮೆರೆದಿದ್ದಾರೆ.
ಉಪ್ಪಿನಂಗಡಿ ಸಮೀಪದ ನಟ್ಟಿಬೈಲ್ ನಿವಾಸಿಯಾದ ಸುಲೈಮಾನ್ ಸತತ ಹಲವಾರು ದಿನಗಳಿಂದ ಸೊಸೆಯ ಕಿರುಕುಳದಿಂದ ಗೃಹ ಬಂದನದಲ್ಲಿದ್ದರು ಎಂದು ಹೇಳಲಾಗಿದೆ. ಅಲ್ಲದೆ ಸರಿಯಾದ ಊಟ ಉಪಚಾರವಿಲ್ಲದೆ ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಕುಗ್ಗಿ ಹೋಗಿದ್ದರು.
ಈ ವಿಷಯ ಉಪ್ಪಿನಂಗಡಿ ನಾಗರಿಕರು ಗೊತ್ತಾಗಿತ್ತು. ನಂತರ ಸ್ಥಳೀಯರು ಎಸ್.ಐ ನಂದಕುಮಾರ್’ರಿಗೆ ವಿಷಯ ತಿಳಿಸಿದ್ದರು, ಈ ವಿಷಯ ತಿಳಿದು ಸ್ಥಳಕ್ಕೆ ಬೇಟಿ ನೀಡಿದ ಉಪ್ಪಿನಂಗಡಿ ಸಬ್’ಇನ್ಸ್’ಪೆಕ್ಟರ್ ನಂದಕುಮಾರ್ ಊರವರಿಗೆ ಬರವಸೆ ನೀಡಿ ಸುಲೈಮಾನ್’ರವರನ್ನು ಗೃಹ ಬಂದನದಿಂದ ಮುಕ್ತಗೊಳಿಸಿ, ತನ್ನ ಸ್ವಂತಮನೆಯಲ್ಲಿ ಆಶ್ರಯ ನೀಡಿ, ಊಟ ಉಪಚಾರ ನೀಡಿ, ಮಾನವಿಯತೆ ಮೆರೆದಿದ್ದಾರೆ.
ಎಸ್.ಐ ನಂದಕುಮಾರ್’ರ ಈ ಕಾರ್ಯವನ್ನು ಸಹಿಸದ ಸೊಸೆ ಹಾಗು ಮಗ ಅವರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುವ ಕೆಲಸವನ್ನು ಮಾಡಿದ್ದರು, ಆದರೆ ಸಂಬಂಧ ಇಲ್ಲದೆ ಇದ್ದರೂ ವ್ಯಕ್ತಿಯೊಬ್ಬರಿಗೆ ಊಟ ಉಪಚಾರ ಮಾಡಿ ಮಾನವೀಯತೆ ತೋರಿರುವ ಎಸ್.ಐಯವರ ಕಾರ್ಯಕ್ಕೆ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.