DAKSHINA KANNADA
ಮಂಗಳೂರು ನಗರದಲ್ಲಿ ಭಾರಿ ಅಗ್ನಿ ಅನಾಹುತ , 25 ಲಕ್ಷ ರೂ. ಮೌಲ್ಯದ ಔಷಧ ಸಾಮಾಗ್ರಿ ಬೆಂಕಿಗಾಹುತಿ..!

ಮಂಗಳೂರು : ಮಂಗಳೂರು ನಗರದಲ್ಲಿ ಭಾನುವಾರ ಭಾರಿ ಅಗ್ನಿ ಅನಾಹುತ ಸಂಭವಿಸಿದ್ದು, ಲಕ್ಷಾಂತರ ಮೌಲ್ಯದ ಔಷಧ ಸಾಮಾಗ್ರಿಗಳು ಬೆಂಕಿಗಾಹುತಿಯಾಗಿದೆ.
ನಗರದ ಬಿಜೈ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿಯ ನಾಯಕ್ಸ್ ಡಿಸ್ಟ್ರಿಬ್ಯೂಟರ್ಸ್ ಎಂಬ ಎರಡು ಅಂತಸ್ಥಿನ ಔಷಧ ಸಾಮಾಗ್ರಿಗಳ ಮಳಿಗೆಗೆ ಭಾನುವಾರ ರಾತ್ರಿ ಬೆಂಕಿ ಬಿದ್ದಿದೆ. ಮಾಹಿತಿ ಪಡೆದ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಆರಿಸುವ ಕಾರ್ಯ ನಡೆಸಿತು, ಶಾರ್ಟ್ ಸರ್ಕೀಟ್ ನಿಂದ ಈ ಬೆಂಕಿ ಅನಾಹುತಾ ಸಂಭವಿಸಿದ್ದು. ಒಟ್ಟು 25 ಲಕ್ಷ ರೂಪಾಯಿ ಯ ಸೊತ್ತುಗಳು ಬೆಂಕಿಗಾಹುತಿಯಾಗಿದೆ ಎಂದು ತಿಳಿದು ಬಂದಿದೆ.
