DAKSHINA KANNADA
ಚಲಿಸುತ್ತಿದ್ದ ಬಸ್ ಮೇಲೆ ಬಿದ್ದ ಬೃಹತ್ ತೆಂಗಿನ ಮರ!

ಮಂಗಳೂರು, ಅಗಸ್ಟ್ 17 : ಚಲಿಸುತ್ತಿದ್ದ ಖಾಸಗಿ ಬಸ್ ಮೇಲೆ ತೆಂಗಿನ ಮರವೊಂದು ಬಿದ್ದ ಘಟನೆ ನಗರದ ಮಲ್ಲಿಕಟ್ಟೆ ವೃತ್ತದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಘಟನೆಯಲ್ಲಿ ಪ್ರಯಾಣಿಕರೆಲ್ಲರೂ ಪವಾಡ ಸದೃಶ್ಯವಾಗಿ ಪಾರಾಗಿದ್ದಾರೆ.
ಮಂಗಳಾದೇವಿ- ಸುರತ್ಕಲ್ ನಡುವೆ ಚಲಿಸುವ ಸಿಟಿ ಬಸ್ ಮೇಲೆ ಈ ತೆಂಗಿನ ಮರ ಬಿದ್ದಿದೆ. ಅದೃಷ್ಟವಶಾತ್ ಪ್ರಯಾಣಿಕರು ಮತ್ತು ಸಿಬ್ಬಂದಿ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಸಿ ಟಿ ಬಸ್ ಮೇಲೆ ಬೀಳುವ ಮುನ್ನ ಮರವು ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದು ಕೇಬಲ್ ಗಳನ್ನು ತುಂಡರಿಸಿದೆ ಎಂದು ಹೇಳಲಾಗಿದೆ.