DAKSHINA KANNADA
ಪುತ್ತೂರಿನಲ್ಲೊಂದು ವಿಸ್ಮಯ ಕೋಟಿ ಚೆನ್ನಯ್ಯ ದೈವಗಳು ಗುರುತಿಸಿದ ಸ್ಥಳದಲ್ಲಿ ಅಗಾಧ ಪ್ರಮಾಣದ ನೀರು
ಪುತ್ತೂರಿನಲ್ಲೊಂದು ವಿಸ್ಮಯ ಕೋಟಿ ಚೆನ್ನಯ್ಯ ದೈವಗಳು ಗುರುತಿಸಿದ ಸ್ಥಳದಲ್ಲಿ ಅಗಾಧ ಪ್ರಮಾಣದ ನೀರು
ಪುತ್ತೂರು ಜನವರಿ 17: ಪುತ್ತೂರು ತಾಲೂಕಿನ ಪಾಪೆಮಜಲು ಕೋಟಿ-ಚೆನ್ನಯ ಗರಡಿಯಲ್ಲಿ ವಿಸ್ಮಯವೊಂದು ಬೆಳಕಿಗೆ ಬಂದಿದೆ. ಇಲ್ಲಿ ಆರಾಧಿಸಲ್ಲಡುವ ತುಳುನಾಡಿನ ಐತಿಹಾಸಿಕ ವೀರ ಪುರುಷರಾದ ಕೋಟಿ-ಚೆನ್ನಯ ಗರಡಿ ಇರುವ ಸ್ಥಳದಲ್ಲಿ ನೀರಿನ ಕೊರತೆ ಎದುರಾದ ಸಂದರ್ಭದಲ್ಲಿ ಗರಡಿಯ ಉಸ್ತುವಾರಿಗಳು ಕಳೆದ ಬಾರಿ ನಡೆದ ಭೂತಗಳ ನರ್ತನದ ಸಮಯದಲ್ಲಿ ಈ ದೈವಗಳ ಮುಂದೆ ನೀರಿನ ಸಮಸ್ಯೆಯ ಬಗ್ಗೆ ಅರುಹಿದ್ದರು.
ಆ ಸಮಯದಲ್ಲಿ ಅವಳಿ ದೈವಗಳು ತಮ್ಮ ಆಯುಧವಾದ ಸುರ್ಯದಲ್ಲಿ ಗರಡಿಯ ಆವರಣದಲ್ಲಿದ್ದ ಸ್ಥಳದಲ್ಲಿ ಗುರುತು ಹಾಕಿ ಅದೇ ಸ್ಥಳದಲ್ಲಿ ಕೊಳವೆ ಬಾವಿ ಕೊರೆಯುವಂತೆ ಸೂಚಿಸಿದ್ದವು. ಆ ಪ್ರಯುಕ್ತ ಎರಡು ದಿನಗಳ ಹಿಂದೆ ದೈವಗಳು ಸೂಚಿಸಿದ ಸ್ಥಳದಲ್ಲೇ ಕೊಳವೆ ಬಾವಿ ಕೊರೆಯುವ ಕಾಮಗಾರಿ ಆರಂಭಿಸಿದ್ದರು.
ಬಾವಿ ಕೊರೆಯುತ್ತಿದ್ದ ಸ್ಥಳದಲ್ಲಿ ಭೂಮಿಯಡಿಯಿಂದ ರಭಸದಿಂದ ನೀರು ಹೊರ ಚಿಮ್ಮಿದ್ದು, ಸ್ಥಳೀಯರ ವಿಸ್ಮಯಕ್ಕೆ ಕಾರಣವಾಗಿದೆ. ಕೊಳವೆ ಬಾವಿ ಕೊರೆಯುವ ಸಂದರ್ಭ ವಿವಿಧ ವೈಜ್ಞಾನಿಕ ವಿಧಾನ ಅನುಸರಿಸಬೇಕಾದ ಈ ಕಾಲಘಟ್ಟದಲ್ಲಿ ದೈವಗಳು ಕೇವಲ ತನ್ನ ಆಯುಧಗಳಿಂದ ಸೂಚಿಸಿದ ಸ್ಥಳದಲ್ಲಿ ಅಗಾಧ ಪ್ರಮಾಣದ ನೀರು ಸಿಕ್ಕಿರುವುದು ದೈವದ ಇರುವಿಕೆಗೆ ಸಾಕ್ಷಿ ಎನ್ನುವ ಅಭಿಪ್ರಾಯಗಳೂ ಇದೀಗ ಹರಿದಾಡಲಾರಂಭಿಸಿದೆ.