KARNATAKA
ಚಿಕ್ಕಮಗಳೂರು : ಕೈ ಹಿಡಿದು ನಡೆಸುವ ಗಂಡನಿದ್ರೂ, ಫೇಸ್ ಬುಕ್ ಪ್ರೇಮಿ ಕೈಯಲ್ಲಿ ಬಲಿಯಾದ ಗೃಹಿಣಿ.!
ಚಿಕ್ಕಮಗಳೂರು : ಕೈ ಹಿಡಿದು ನಡೆಸುವ ಗುಣವಂತ ಗಂಡನಿದ್ರೂ ಫೇಸ್ ಬುಕ್ ನ ಪಾಗಲ್ ಪ್ರೇಮಿ ಕೈಯಲ್ಲಿ ಯುವ ಗೃಹಿಣಿಯೋರ್ವಳು ಬಲಿಯಾದ ಘಟನೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಕಿಚ್ಚಬ್ಬಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ರಿಯಕರನ ಚೂರಿ ಇರಿತಕ್ಕೆ ಯುವ ಗೃಹಿಣಿ ತೃಪ್ತಿ(25) ಬಲಿಯಾಗಿದ್ದಾಳೆ. ಹತ್ಯೆಗೈದ ಬಳಿಕ ಪ್ರಿಯಕರ ಆರೋಪಿ ಚಿರಂಜೀವಿ ಕೃಷಿ ಹೊಂಡಕ್ಕೆ ಶವ ಎಸೆದು ಪರಾರಿ ಆಗಿದ್ದಾನೆ. ಘಟನಾ ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಕೊಲೆಯಾದ ತೃಪ್ತಿ ಮತ್ತು ಆರೋಪಿ ಚಿರಂಜೀವಿ ಫೇಸ್ಬುಕ್ ಮೂಲಕ ಪರಿಚಯವಾಗಿ ಬಳಿಕ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಒಂದು ತಿಂಗಳ ಹಿಂದೆ ಚಿನ್ನದಂತಹ ಪತಿ ರಾಜು ಬಿಟ್ಟು ಪ್ರಿಯಕರನ ಜೊತೆ ತೃಪ್ತಿ ನಾಪತ್ತೆಯಾಗಿದ್ದರು. ಈ ಬಗ್ಗೆ ಬಾಳೆಹೊನ್ನೂರು ಠಾಣೆಯಲ್ಲಿ ನಾಪತ್ತೆ ಪ್ರಕರಣ ಕೂಡ ದಾಖಲಾಗಿತ್ತು.ಬಿಜಾಪುರದಲ್ಲಿ ತಲೆಮರೆಸಿಕೊಂಡಿದ್ದ ತೃಪ್ತಿ ಮತ್ತು ಪ್ರಿಯಕರ ಚಿರಂಜೀವಿಯನ್ನು ಪೊಲೀಸರು ಹುಡುಕಿ ಕರೆತಂದಿದ್ದರು. ಪೋಷಕರ ಸಂಧಾನದ ಬಳಿ ಪತಿ ರಾಜುವಿನ ಜೊತೆ ತೃಪ್ತಿ ತೆರಳಿದ್ದಾರೆ. ಇದರಿಂದ ಕುಪಿತಗೊಂಡ ಚಿರಂಜೀವಿ ತೃಪ್ತಿಯನ್ನು ಹತ್ಯೆ ಮಾಡಿ ಪರಾರಿ ಆಗಿದ್ದಾನೆ. ಶನಿವಾರ ತೃಪ್ತಿ ಪತಿ ಕೆಲಸಕ್ಕೆ ಹೋಗಿದ್ದಾಗ ಏಕಾಏಕಿ ಮನೆಗೆ ಬಂದು ಮಕ್ಕಳ ಎದುರೇ ಆರೋಪಿ ಚಿರಂಜೀವಿ ಚಾಕುವಿನಿಂದ ಚುಚ್ಚಿ ತೃಪ್ತಿ ಕೊಲೆಗೆ ಯತ್ನಿಸಿದ್ದಾನೆ. ಚಾಕುವಿನಿಂದ ಚುಚ್ಚಿ ಅರೆ ಜೀವವಿದ್ದ ಆಕೆಯಯನ್ನು ಮನೆ ಹಿಂದಿನ ಕೆರೆಗೆ ಎಸೆದು ಪರಾರಿಯಾಗಿದ್ದಾನೆ. ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ.