LATEST NEWS
ಕಡ್ಡಾಯವಾಗಿ ಆಸ್ಪತ್ರೆಗಳಲ್ಲಿ ವೆಚ್ಚದ ವಿವರ ನಮೂದಿಸಿ : ಜಿಲ್ಲಾಧಿಕಾರಿ

ಕಡ್ಡಾಯವಾಗಿ ಆಸ್ಪತ್ರೆಗಳಲ್ಲಿ ವೆಚ್ಚದ ವಿವರ ನಮೂದಿಸಿ : ಜಿಲ್ಲಾಧಿಕಾರಿ
ಉಡುಪಿ, ಅಕ್ಟೋಬರ್ 6: ಜಿಲ್ಲೆಯ ಎಲ್ಲಾ ಖಾಸಗಿ ಅಸ್ಪತ್ರೆಗಳು ತಮ್ಮಲ್ಲಿ ನೀಡುವ ಚಿಕಿತ್ಸೆಯ ದರಗಳನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವಂತೆ ಪ್ರದರ್ಶಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಜಿಲ್ಲಾದಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅರೋಗ್ಯ ಇಲಾಖೆಯ ವಿವಿಧ ಸಮಿತಿಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ನಿಗಧಿಪಡಿಸಿದ ದರಗಳನ್ನು ಸಾರ್ವಜನಿರಿಗೆ ಕಾಣುವಂತೆ ಪ್ರದರ್ಶಿಸುವಂತೆ ಆದೇಶಿಸಿದ್ದರೂ ಸಹ ಹಲವು ಕಡೆ , ಸಾರ್ವಜನಿರಿಗೆ ಕಾಣದಂತೆ ಅಸ್ಪತ್ರೆಯ ಯಾವುದೂ ಮೂಲೆಯಲ್ಲಿ ಅಳವಡಿಸಲಾಗಿದೆ ಅಲ್ಲದೆ ಹಲವು ಆಸ್ಪತ್ರೆಗಳಲ್ಲಿ ಈ ಹಿಂದೆ ನಮೂದಿಸಿದ್ದ ದರಗಳೇ ಇದ್ದು, ಪ್ರಸ್ತುತ ಇರುವ ದರಗಳನ್ನು ದರ ಗಳನ್ನು ನಮೂದಿಸಿಲ್ಲ, ಆದ್ದರಿಂದ ಎಲ್ಲಾ ಆಸ್ಪತ್ರೆಗಳು ತಮ್ಮ ಇತ್ತೀಚಿನ ಚಿಕಿತ್ಸೆಯ ದರಗಳನ್ನು ಸ್ಪಷ್ಟವಾಗಿ ಕಾಣುವಂತೆ ನಮೂದಿಸುವಂತೆ ತಿಳಿಸಿದರು.
ಈ ಬಗ್ಗೆ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಮತ್ತು ಆಸ್ಪತ್ರೆಗಳು ತಮ್ಮ ವೈದ್ಯಕೀಯ ನವೀಕರಣಕ್ಕೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ , ದರ ಪ್ರದರ್ಶನದ ಕುರಿತು ಛಾಯಾಚಿತ್ರಗಳನ್ನು ಪಡೆದು ನವೀಕರಣ ಮಾಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದರು.