LATEST NEWS
ನಿರಾಶ್ರಿತರಿಗೆ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿದ ಹೋಪ್ ಇಂಡಿಯಾ ಫೌಂಡೇಶನ್
ಉಡುಪಿ, ಮೇ 19: ಉಡುಪಿಯ ಬೋರ್ಡ್ ಹೈಸ್ಕೂಲ್ ಕಟ್ಟಡದಲ್ಲಿ ಆಶ್ರಯ ಪಡೆದಿರುವ 70 ಜನ ನಿರ್ಗತಿಕರು,ಭಿಕ್ಷುಕರು ಹಾಗೂ ನಿರಾಶ್ರಿತರಿಗೆ ಎರಡು ದಿನಗಳ ಹಿಂದೆ ಕೊರೋನಾ ತಪಾಸಣೆ ನಡೆಸಲಾಗಿತ್ತು.
ಸಾಮಾಜಿಕ ಸೇವಾ ಸಂಸ್ಥೆ ಹೋಪ್ ಇಂಡಿಯಾ ಫೌಂಡೇಷನ್ ಇದರ ನೇತೃತ್ವ ವಹಿಸಿತ್ತು. ಇದೀಗ ಅವರೆಲ್ಲರ ಕೋವಿಡ್ ಪರೀಕ್ಷೆಯ ವರದಿ ಬಂದಿದ್ದು 12 ಮಂದಿಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ತಕ್ಷಣ ಸೋಂಕು ತಗಲಿರುವ 12 ಜನರನ್ನು ಪ್ರತ್ಯೇಕವಾಗಿಡುವ ವ್ಯವಸ್ಥೆ ಮಾಡಲಾಗಿದೆ.
ಜೊತೆಗೆ ಅವರಿಗೆಲ್ಲ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಹೋಪ್ ಇಂಡಿಯಾ ಫೌಂಡೇಶನ್ ವಹಿಸಿಕೊಳ್ಳುವ ಮೂಲಕ ಮಾನವೀಯತೆ ಮೆರೆದಿದೆ. ಲಾಕ್ ಡೌನ್ ಮುಗಿಯುವ ತನಕ ನಿರ್ಗತಿಕರ ಸೇವೆಯನ್ನು ಇದೇ ರೀತಿ ಮುಂದುವರೆಸುವುದಾಗಿ ಫೌಂಡೇಶನ್ ನ ಅನ್ಸಾರ್ ಅಹಮದ್ ಹೇಳಿದ್ದಾರೆ.