Connect with us

DAKSHINA KANNADA

ಮಂಗಳೂರು: ಮಾಸ್ಕ್ ಹಾಕದ ವೈದ್ಯ ಸೂಪರ್ ಮಾರ್ಕೆಟಿನಲ್ಲಿ ಮಾತಿನ ಚಕಮಕಿ, ವೀಡಿಯೋ ವೈರಲ್

ಮಂಗಳೂರು, ಮೇ 19: ಕೊರೊನಾ 2 ನೇ ಅಲೆಗೆ ಇಡೀ ದೇಶ ಕಂಗೆಟ್ಟಿದೆ. ಕರಾವಳಿ ಜಿಲ್ಲೆ ದಕ್ಷಿಣ ಕನ್ನಡವೂ ಇದಕ್ಕೆ ಹೊರತಾಗಿಲ್ಲ. ಮಂಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕೊರೊನಾ ಕೇಸ್‌ ಗಳು ಜಾಸ್ತಿಯಾಗುತ್ತಿದ್ದು ಆನೇಕ ಸಾವು- ನೋವುಗಳು ಸಂಭವಿಸಿವೆ.

ಈಗಾಗಲೇ ಲಾಕ್ ಡೌನ್ ಕೂಡ ಜಾರಿ ಮಾಡಲಾಗಿದೆಯಾದರೂ ಸದ್ಯಕ್ಕೆ ಪರಿಹಾರ ಕಾಣದ ಕಾರಣ ಸಾರ್ವಜನಿಕರಿಗೆ ಮಾಸ್ಕ್- ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜಿಲ್ಲಾಡಳಿತ ಮನವಿ ಮತ್ತು ಜಾಗೃತಿಯ ಕಾರ್ಯ ಮಾಡುತ್ತಿದ್ದು ಈ ಮಧ್ಯೆ ಮಂಗಳೂರಿನ ಖ್ಯಾತ ವೈದ್ಯರೊಬ್ಬರು ಮಾಸ್ಕ್ ಹಾಕದೇ ನಗರದ ಸೂಪರ್ ಮಾರ್ಕೆಟಿಗೆ ಅಗತ್ಯ ವಸ್ತುಗಳ ಖರೀದಿಗೆ ಹೋದ ವಿಡಿಯೊಂದು ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮಾಸ್ಕ್ ಹಾಕದ ಕಾರಣ ಸೂಪರ್ ಮಾರ್ಕೆಟ್ ವ್ಯವಸ್ಥಾಪಕರು ಮತ್ತು ವೈದ್ಯರ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ. ಜವಾಬ್ದಾರಿಯುತ ವೈದ್ಯರು ಸಾರ್ವಜನಿಕ ಸ್ಥಳದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿಲ್ಲ ಎಂದು ಆನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Video: