LATEST NEWS
ಹನಿಟ್ರ್ಯಾಪ್ ಗೆ ಸಿಲುಕಿಕೊಂಡ ಬಿಜೆಪಿ ಮುಖಂಡ – ಇಬ್ಬರು ಅರೆಸ್ಟ್….!!
ಮಂಡ್ಯ: ಹನಿಟ್ರ್ಯಾಪ್ ಗೆ ಸಿಲುಕಿಕೊಂಡ ಬಿಜೆಪಿ ಮುಖಂಡರೊಬ್ಬರಿಂದ 50 ಲಕ್ಷ ಹಣವನ್ನು ಸುಲಿಗೆ ಮಾಡಲಾಗಿದ್ದು. ಇದೀಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
ನಗರದ ಶ್ರೀನಿಧಿ ಗೋಲ್ಡ್ ಮಾಲೀಕ, ಬಿಜೆಪಿಯ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಎಸ್.ಜಗನ್ನಾಥ ಎಸ್.ಶೆಟ್ಟಿ ಹನಿಟ್ರ್ಯಾಪ್‌ಗೆ ಒಳಗಾಗಿರುವ ವ್ಯಕ್ತಿ. ₹ 50 ಲಕ್ಷ ಪಡೆದಿರುವ ಆರೋಪದಲ್ಲಿ ಮಂಡ್ಯದ ಸುಭಾಷ್‌ನಗರದ 8ನೇ ಕ್ರಾಸ್ ನಿವಾಸಿ ಸಲ್ಮಾಬಾನು ಮತ್ತು ಜಯಂತ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಸಲ್ಮಾಬಾನು ಹನಿಟ್ರ್ಯಾಪ್ ಮಾಡಿದ್ದಾರೆ ಎನ್ನಲಾಗಿದ್ದು, ಇತರ ಮೂವರು ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಜಗನ್ನಾಥ ಶೆಟ್ಟಿ ಮಂಗಳೂರಿಗೆ ತೆರಳಲು ಮಂಡ್ಯದಲ್ಲಿ ಬಸ್ಗಾಗಿ ಕಾಯುತ್ತಿದ್ದರು. ಈ ವೇಳೆ ನಾಲ್ವರು ಮೈಸೂರಿಗೆ ಡ್ರಾಪ್ ಕೊಡುವುದಾಗಿ ಕಾರಿನಲ್ಲಿ ಕರೆದೊಯ್ದಿದ್ದರು. ನಂತರ ಚಿನ್ನದ ಪರೀಕ್ಷೆಗೆಂದು ಅಪಹರಿಸಿದ್ದಾರೆ. ಜಗನ್ನಾಥ ಶೆಟ್ಟಿ ಅವರನ್ನು ಅಪಹರಿಸಿ ಲಾಡ್ಜ್ ರೂಮ್ಗೆ ಕರೆದೊಯ್ಯುತ್ತಿದ್ದಾರೆ. ರೂಮ್ನಲ್ಲಿ ಯುವತಿ ಜೊತೆ ವಿಡಿಯೋ ಚಿತ್ರೀಕರಿಸಿಕೊಂಡು 4 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ.
ಅಂತಿಮವಾಗಿ ಜಗನ್ನಾಥ ಶೆಟ್ಟಿ 50 ಲಕ್ಷ ರೂಪಾಯಿ ನೀಡಿ ತೆರಳಿದ್ದಾರೆ. ಇಷ್ಟಕ್ಕೆ ಸುಮ್ಮನಾದ ಗ್ಯಾಂಗ್ ಮತ್ತೆ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಇದರಿಂದ ಜಗನ್ನಾಥ ಶೆಟ್ಟಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇರೆಗೆ ಸಮಾಜ ಸೇವೆ, ಮಾನವ ಹಕ್ಕು ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಸಲ್ಮಾಬಾನು ಎಂಬುವರನ್ನು ಪಶ್ಚಿಮ ಠಾಣೆ ಪೊಲೀಸರು ಬಂಧಿಸಿದ್ದಾರೆ.