Connect with us

    LATEST NEWS

    ಪೊಲೀಸ್ ವಾಹನದಲ್ಲೇ ಕುಳಿತು ಹುಟ್ಟು ಹಬ್ಬ ಆಚರಿಸಿದ ಕೊಲೆ ಆರೋಪಿ – ವೀಡಿಯೋ ವೈರಲ್

    ಮುಂಬೈ, ಆಗಸ್ಟ್ 22: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸ್‍ನಗರದಲ್ಲಿ ಕೊಲೆ ಮಾಡಿದ್ದ ಆರೋಪಿಯೊಬ್ಬ ತನ್ನ ಬರ್ತ್‍ಡೇ ಕೇಕ್ ಅನ್ನು ಪೊಲೀಸ್ ವಾಹನದಲ್ಲಿ ಕಟ್ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರೋಷನ್ ಝಾ ಜೈಲಿನಲ್ಲಿದ್ದಾನೆ. ಉಲ್ಲಾಸನಗರದ ನಿವಾಸಿಯಾಗಿರುವ ರೋಷನ್ ಝಾ ಒಬ್ಬ ದರೋಡೆಕೋರನಾಗಿದ್ದು, ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಸುಲಿಗೆ ಸೇರಿದಂತೆ ಹಲವು ಪ್ರಕರಣಗಳು ಈತನ ಮೇಲೆ ದಾಖಲಾಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ರೋಷನ್ ಝಾ ಅನ್ನು ಜೈಲಿನಿಂದ ಕಲ್ಯಾಣ್ ನ್ಯಾಯಾಲಯಕ್ಕೆ ಕರೆದೊಯ್ಯಲಾಗಿತ್ತು. ಜೈಲಿನಿಂದ ಹೊರ ಹೋಗುತ್ತಿರುವ ಆರೋಪಿಯ ಬೆಂಬಲಿಗರು ಕೇಕ್ ತಂದಿದ್ದರು. ಅದನ್ನು ಆರೋಪಿ ಪೊಲೀಸ್ ವಾಹನದಲ್ಲಿಯೇ ಕುಳಿತುಕೊಂಡು ಕಿಟಕಿಯಿಂದ ಕತ್ತರಿಸಿದ್ದಾನೆ.

    ರೋಷನ್ ಝಾ ಕೇಕ್ ಕತ್ತರಿಸುತ್ತಿರುವ ವೀಡಿಯೋವನ್ನು ಆತನ ಬೆಂಬಲಿಗರು ಮೊಬೈಲ್‍ನಲ್ಲಿ ಸೆರೆಹಿಡಿದು ನಂತರ ತಮ್ಮ ವಾಟ್ಸಾಪ್ ಸ್ಟೇಟಸ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಬಳಿಕ ವೀಡಿಯೋ ವೈರಲ್ ಆಗಿದ್ದು, ಪೊಲೀಸರು ಆರೋಪಿಗೆ ಕೇಕ್ ಕತ್ತರಿಸಲು ಅವಕಾಶ ಮಾಡಿಕೊಟ್ಟಿದ್ದು, ಮಧ್ಯಪ್ರವೇಶಿಸದೇ ಇರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply