UDUPI
ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹರಕ್ಷಕದಳದ ಸೇವೆ ಅತ್ಯಗತ್ಯ : ಅಡಿಶನಲ್ ಎಸ್ಪಿ ಕುಮಾರಸ್ವಾಮಿ
ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹರಕ್ಷಕದಳದ ಸೇವೆ ಅತ್ಯಗತ್ಯ : ಅಡಿಶನಲ್ ಎಸ್ಪಿ ಕುಮಾರಸ್ವಾಮಿ
ಉಡುಪಿ, ನವೆಂಬರ್ 11: ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹರಕ್ಷಕದಳದ ಸೇವೆ ಅತ್ಯಗತ್ಯವಾಗಿದೆ.
ಜಿಲ್ಲೆಯ ಗೃಹಕ್ಷಕರು ನಿರೀಕ್ಷೆ ಮೀರಿ ನಮ್ಮೊಂದಿಗೆ ಸ್ಪಂದಿಸುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಉಪಾಧೀಕ್ಷಕ ಕುಮಾರಸ್ವಾಮಿ ಹೇಳಿದ್ದಾರೆ.
ಜಿಲ್ಲಾ ಗೃಹರಕ್ಷಕದಳ, ಉಡುಪಿ ಜಿಲ್ಲೆ ಇದರ ಆಶ್ರಯದಲ್ಲಿ ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾ ಗೃಹರಕ್ಷಕದಳ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಿಂದಿನ ದಿನಗಳಲ್ಲಿ ಗೃಹರಕ್ಷಕದಳದವರು ತುರ್ತು ಸಂದರ್ಭದಲ್ಲಿ ಸೇವೆಯನ್ನು ನೀಡುತ್ತಿದ್ದರು;
ಈಗ ನಿರಂತರವಾಗಿ ಅವರ ಸೇವೆಯನ್ನು ಇಲಾಖೆ ಪಡೆಯುತ್ತಿದೆ ಎಂದರು. ಅವರ ಸಮಸ್ಯೆಗಳಿಗೆ ತಾವು ಸ್ಪಂದಿಸುವ ಭರವಸೆಯನ್ನು ಅವರು ಈ ಸಂದರ್ಭದಲ್ಲಿ ನೀಡಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಗೃಹರಕ್ಷಕದಳದ ಡೆಪ್ಯುಟಿ ಕಮಾಂಡೆಟ್ ರಮೇಶ್, ಮಣಿಪಾಲ ಘಟಕದ ಘಟಕಾಧಿಕಾರಿ ಸರಸ್ವತಿ ಕೋಟ್ಯಾನ್,
ಪಡುಬಿದ್ರೆ ಘಟಕದ ಘಟಕಾಧಿಕಾರಿ ನವೀನ್ ಕುಮಾರ್, ಬೈಂದೂರು ಘಟಕದ ರಾಘವೇಂದ್ರ.ಎನ್, ಕಾಪು ಘಟಕದ ಲಕ್ಷ್ಮೀನಾರಾಯಣ ರಾವ್, ಕುಂದಾಪುರ ಘಟಕದ ಭಾಸ್ಕರ ಸಾರ್ಜೇಂಟ್ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಉಡುಪಿ ಗೃಹರಕ್ಷಕದಳದ ಜಿಲ್ಲಾ ಕಮಾಂಡೆಂಟ್ ಕೆ. ಪ್ರಶಾಂತ್ ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು.
ಕಾರ್ಯಕ್ರಮದಲ್ಲಿ ಸೆಕೆಂಡ್ ಇನ್ ಕಮಾಂಡ್ ಕೆ.ಸಿ.ರಾಜೇಶ್,ಡೆಪ್ಯುಟಿ ಕಮಾಂಡೆಂಟ್ ರಮೇಶ್ ವಂದಿಸಿ, ಸಾಯಿನಾಥ ಉದ್ಯಾವರ್, ಉದ್ಯಮಿ ಸುಧಾಕರ ಶೆಟ್ಟಿ, ಗೃಹರಕ್ಷಕದಳದ ಅಧಿಕಾರಿಗಳು, ಘಟಕಾಧಿಕಾರಿಗಳು, ಗೃಹರಕ್ಷಕ ದಳದ ಪುರುಷ ಹಾಗೂ ಮಹಿಳಾ ಗೃಹರಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
You must be logged in to post a comment Login