LATEST NEWS
ರಾಜ್ಯದಲ್ಲಿ ಪೊಲೀಸ್ ನೇಮಕಾತಿಗೆ ಲಂಚ ಕೇಳಿದವರ ಬಗ್ಗೆ ನನಗೆ ನೇರ ಮಾಹಿತಿ ಕೊಡಿ – ಗೃಹ ಸಚಿವ

ಉಡುಪಿ ಅಕ್ಟೋಬರ್ 09: ರಾಜ್ಯದಲ್ಲಿ ಪೊಲೀಸ್ ನೇಮಕಾತಿಗೆ ಲಂಚ ಕೇಳಿದವರ ಬಗ್ಗೆ ಮಾಹಿತಿ ಇದ್ದರೆ ನನಗೆ ನೇರವಾಗಿ ನೀಡಿ ಎಂದು ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಯಾರು ಯಾರನ್ನು ಖರೀದಿ ಮಾಡಲು ಸಾಧ್ಯವಿಲ್ಲ, ನಾವು ಖರೀದಿಯ ಸರಕುಗಳು ಅಲ್ಲ. ಕೆಲಸ ಪಡೆಯುವ ಉದ್ದೇಶದಿಂದ ಯಾರು ಹಣ ಕಳೆದುಕೊಳ್ಳಬೇಡಿ, ನೇಮಕಾತಿ ಗೆ ಲಂಚ ವಿಚಾರದಲ್ಲಿ ಡಿಜಿಪಿ ಜೊತೆ ಮಾಡಿದ್ದೇನೆ. ವಿಶೇಷವಾದ ತಂಡ ರಚನೆ ಮಾಡಿ ದಾಳಿಗಳನ್ನು ಮಾಡುತ್ತೇವೆ. ಪ್ರತಿ ಪೊಲೀಸ್ ಠಾಣೆ ಮೇಲೆ ನಿಗಾ ಇಡಲಾಗುವುದು ಎಂದರು.

ಇನ್ನು ಎಸ್ ಐ ಪೋಸ್ಟ್ ಗೆ 25 ಲಕ್ಷ ಲಂಚ ತೆಗೆದುಕೊಂಡ ಬಗ್ಗೆ ಬೆಂಗಳೂರಿನಲ್ಲಿ ದೂರು ದಾಖಲಾಗಿದೆ. ನೇಮಕಾತಿ ಹಿಂದಿನ ಜಾಲವನ್ನು ಬಯಲಿಗೆಳೆಯುತ್ತೇವೆ, ಮೆರಿಟ್ ಮತ್ತು ಯೋಗ್ಯತೆ ಇರುವವರು ಪೊಲೀಸ್ ಇಲಾಖೆಗೆ ಬರಬೇಕು. ಹಣ ಪೊಲೀಸ್ ಇಲಾಖೆಯನ್ನು ಕೊಂಡುಕೊಳ್ಳಬಾರದು. ಲಂಚ ವಿಚಾರದಲ್ಲಿ ಸ್ಥಳೀಯರು ಪೊಲೀಸ್ ಠಾಣೆಗೆ ದೂರು ಕೊಡಿ ಎಂದು ಜನರಲ್ಲಿ ಮನವಿ ಮಾಡಿದರು.