LATEST NEWS
ಯುವತಿಯರೊಂದಿಗೆ ಚಕ್ಕಂದವಾಡುತ್ತಿದ್ದ ಹೋಂಗಾರ್ಡ್ ಸೆಲ್ಫಿ ಸುಜಿತ್ ಶೆಟ್ಟಿ ಸಸ್ಪೆಂಡ್

ಯುವತಿಯರೊಂದಿಗೆ ಚಕ್ಕಂದವಾಡುತ್ತಿದ್ದ ಸೆಲ್ಫಿ ಹೋಂಗಾರ್ಡ್ ಸುಜಿತ್ ಶೆಟ್ಟಿ ಸಸ್ಪೆಂಡ್
ಉಡುಪಿ, ಮಾರ್ಚ್ 16 : ಅಮಾಯಕ ಯುವತಿಯರನ್ನು ಪುಸಲಾಯಿಸಿ ಅವರೊಂದಿಗೆ ಚಕ್ಕಂದವಾಡಿ,
ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟ ಕಾರ್ಕಳ ಮೂಲದ ಸುಜಿತ್ ಶೆಟ್ಟಿ ಅವನನ್ನು ಹೋ ಗಾರ್ಡ್ ಕರ್ತವ್ಯದಿಂದ ವಜಾ ಮಾಡಲಾಗಿದೆ.

ಈ ಬಗ್ಗೆ ಉಡುಪಿ ಗೃಹ ರಕ್ಷಕ ದಳದ ಕಮಾಡೆಂಟ್ ಡಾ. ಪ್ರಶಾಂತ್ ಶೆಟ್ಟಿ ಅವರು ಆದೇಶ ಹೊರಡಿಸಿದ್ದಾರೆ.
ಸುಜಿತ್ ಶೆಟ್ಟಿ ಅವರು ಗೃಹ ರಕ್ಷಕ ದಳದ ಪಡುಬಿದ್ರೆ ಘಟಕದಲ್ಲಿ ಹೋಂ ಗಾರ್ಡಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಸ್ತುತ ಬಂಧನದ ಭೀತಿಯಲ್ಲಿರುವ ಸುಜಿತ್ ತಲೆ ಮರೆಸಿಕೊಂಡಿದ್ದಾನೆ.
Continue Reading