LATEST NEWS
ಕೇಂದ್ರ ಸಚಿವ ಅನಂತ್ ಕುಮಾರ್ ನಿಧನಕ್ಕೆ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಸಂತಾಪ

ಕೇಂದ್ರ ಸಚಿವ ಅನಂತ್ ಕುಮಾರ್ ನಿಧನಕ್ಕೆ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಸಂತಾಪ
ಪುತ್ತೂರು ನವೆಂಬರ್ 12 ಕೇಂದ್ರ ಸಚಿವ ಅನಂತ ಕುಮಾರ್ ಅವರ ನಿಧನಕ್ಕೆ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಸಂತಾಪ ಸೂಚಿಸಿದ್ದಾರೆ. ಅನಂತ್ ಕುಮಾರ್ ಅವರ ನಿಧನ ಸುದ್ದಿ ಕೇಳಿ ಆಘಾತವಾಗಿದೆ.
ನಾನು ಬಿಜೆಪಿ ಪಕ್ಷದಲ್ಲಿ ಇದ್ದ ಸಂದರ್ಭ ನನಗೆ ಮಾರ್ಗದರ್ಶನ ಮಾಡಿದವರು ಅನಂತ್ ಕುಮಾರ್ , ಅವರ ಹಾಗೂ ಅವರ ತಾಯಿಯ ಪ್ರಭಾವ ನನ್ನ ರಾಜಕೀಯ ಜೀವನದ ಮೇಲಿದೆ ಎಂದು ಹೇಳಿದರು.

ಅವರ ಅಗಲಿಕೆಯನ್ನು ಉಹಿಸಲೂ ಸಾಧ್ಯವಾಗುತ್ತಿಲ್ಲ. ಕರ್ನಾಟಕ ಜನತೆಗೆ ಇದೊಂದು ತುಂಬಲಾರದ ನಷ್ಟ ಎಂದು ಮಾಜಿ ಶಾಸಕ ಶಕುಂತಲಾ ಶೆಟ್ಟಿ ತಿಳಿಸಿದ್ದಾರೆ.
Continue Reading