KARNATAKA
ಕೊಡಗು – ಆಟ ಆಡುತ್ತಿರುವಾಗಲೇ ಹೃದಯಾಘಾತಕ್ಕೆ ಬಲಿಯಾದ 22 ವರ್ಷದ ಹಾಕಿ ಆಟಗಾರ
ಮಡಿಕೇರಿ ಡಿಸೆಂಬರ್ 25: ಚಿಕ್ಕ ವಯಸ್ಸಿಗೆ ಹೃದಯಾಘಾತದಿಂದ ಸಾವನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು. ಇಂದು ಹಾಕಿ ಪಂದ್ಯಾಟ ಆಡುತ್ತಿರುವಾಗಲೇ ಆಟಗಾರನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಕೊಡಗಿನ ಮೂರ್ನಾಡುವಿನಲ್ಲಿ ನಡೆದಿದೆ.
ಮೃತನನ್ನು ಸೋಮಯ್ಯ (22) ಎಂದು ಗುರುತಿಸಲಾಗಿದ್ದು, ಮಡಿಕೇರಿ ತಾಲೂಕಿನ ಮೂರ್ನಾಡು ಗ್ರಾಮದಲ್ಲಿ ಕೊಡವ ಹಾಕಿ ಪಂದಾಟ ನಡೆಯುತ್ತಿತ್ತು. ಪಂದ್ಯಾಟ ಆಡುತ್ತಿರುವಾಗಲೇ ಸೋಮಯ್ಯಗೆ ಹೃದಯಘಾತವಾಗಿದ್ದು, ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ.
ಕೂಡಲೇ ಎಚ್ಚೆತ್ತುಕೊಂಡ ಆಯೋಜಕರು, ಸೋಮಯ್ಯ ಅವರನ್ನು ಮಡಿಕೇರಿ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದ್ದಾರೆ. ಆದರೆ ಮಾರ್ಗಮಧ್ಯದಲ್ಲೇ ಸೋಮಯ್ಯ ಉಸಿರು ನಿಲ್ಲಿಸಿದ್ದಾರೆ. ಆರೋಗ್ಯದಾಯಕವಾಗಿದ್ದ ಸೋಮಯ್ಯ ಪಂದ್ಯಾಟ ಆಡುವಾಗಲೇ ಕುಸಿದು ಮೃತಪಟ್ಟಿರುವುದು ಉಳಿದ ಹಾಕಿ ಆಟಗಾರರು ಮತ್ತು ನೆರೆದ ಕ್ರೀಡಾಪ್ರೇಮಿಗಳು ಶಾಕ್ ಆಗಿದ್ದಾರೆ.