ಪೆಂಟಾಕೋಸ್ಟಲ್ ಚರ್ಚ್ ಪ್ರಾರ್ಥನಾ ಗೃಹಗಳ ಮೇಲೆ ದಾಳಿ
ಪೆಂಟಾಕೋಸ್ಟಲ್ ಚರ್ಚ್ ಪ್ರಾರ್ಥನಾ ಗೃಹಗಳ ಮೇಲೆ ದಾಳಿ
ತಮಿಳುನಾಡಿನ ಮಧುರೆಯಲ್ಲಿ 2 ಚರ್ಚ್ ಗಳ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು
ಮಧುರೆ,ಮಾರ್ಚ್ 14 : ಪಂಟಾ ಕೋಸ್ಟಲ್ ಚರ್ಚ್‌ಗೆ ಸಂಬಂಧಿಸಿದ ಎರಡು ಪ್ರಾರ್ಥನಾ ನಿವಾಸಗಳ ಮೇಲೆ ದಾಳಿ ನಡೆದಿರುವುದು ವರದಿಯಾಗಿದೆ.
ಸ್ಥಳೀಯ ಪೊಲೀಸರಿಗೆ ಈ ದಾಳಿಗಳ ಬಗ್ಗೆ ದೂರು ನೀಡಿರುವ ಪಾಸ್ಟರ್ ರವಿ ಜೇಕಬ್ ಅವರು, ಸುಮಾರು 10 ಜನರ ತಂಡ ಈ ದಾಳಿ ನಡೆಸಿದೆ ಎಂದು ಹೇಳಿದ್ದಾರೆ.
ಪ್ರಾರ್ಥನಾ ಗೃಹದ ಮೇಲೆ ದಾಳಿ ನಡೆಸಿದ ಈ ತಂಡ ಅಲ್ಲಿದ್ದ ಕರಪತ್ರಗಳನ್ನು ಮತ್ತು ಬೈಬಲ್ ಪ್ರತಿಗಳನ್ನು ಸುಟ್ಟು ಬೆದರಿಕೆ ಹಾಕಿರುವುದಾಗಿ ಹೇಳಿದ್ದಾರೆ.
ಪೊಲೀಸರು ಇದು ಹಿಂದು ಮುನ್ನಾನಿ ಕಾರ್ಯಕರ್ತರು ನಡೆಸಿರುವ ಕೃತ್ಯವೆಂದು ಶಂಕಿಸಲಾಗಿರುವುದಾಗಿ ಹೇಳಿದ್ದಾರೆ.
ಈ ದಾಳಿಯ ವಿಡಿಯೋ ಚಿತ್ರಿಕೆ ಈಗ ವೈರಲ್ ಆಗಿದ್ದು ದಾಳಿಕೋರರಲ್ಲಿ ಮೂವರನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
10 ಹಿಂದು ಮುನ್ನಾನಿ ಕಾರ್ಯಕರ್ತರ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದ್ದು ತನಿಖೆ ನಡೆಯುತ್ತಿದೆ ಎಂದವರು ಹೇಳಿದ್ದಾರೆ.
ಇದೇ ವೇಳೆ ಹಿಂದು ಮುನ್ನಾನಿ ಕಾರ್ಯಕರ್ತರು ನಡೆಸಿರುವ ಈ ದಾಳಿಯು ಕ್ರೈಸ್ತ ಮತಾಂತರದ ವಿರುದ್ಧವಾಗಿದೆ ಎನ್ನಲಾಗಿದೆ.
You must be logged in to post a comment Login